ನ್ಯೂಡೆಲ್ಲಿ: ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕಾಪಾಡುವ ನಿಟ್ಟಿನಲ್ಲಿ, ಪತ್ರಕರ್ತರಿಗೆ ಶ್ರೀರಕ್ಷೆಯಾಗುವ ಮಹತ್ವದ ತೀರ್ಪುನ್ನು ಸುಪ್ರೀಂಕೋರ್ಟ್ ನೀಡಿದೆ.
ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಲಾಗಿರುವ ಮಾಧ್ಯಮವು ಹೆಚ್ಚು ಸಕ್ರಿಯವಾದಷ್ಟು, ಪ್ರಜಾಪ್ರಭುತ್ವವು ಗಟ್ಟಿಯಾಗಿ ನೆಲೆಯೂರುತ್ತದೆ. ಹೀಗಾಗಿ ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮಹತ್ವದ್ದಾಗಿದೆ.
ದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ, ಯಾರೇ ಆದರೂ ಬೆದರಿಕೆಯೊಡ್ಡಿದರೆ, ಅಪಮಾನ ಮಾಡಿದರೆ ಅಥವಾ ಅವರ ಮೇಲೆ ಹಲ್ಲೆ ಮಾಡಿದರೆ, ಅಂತವರಿಗೆ 50ಸಾವಿರ ರೂಪಾಯಿ ದಂಡ ಹಾಗೂ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಈ ರೀತಿಯ ಭದ್ರತೆ ನೀಡುವುದರಿಂದ ಪತ್ರಕರ್ತರು ಇನ್ನಷ್ಟು ಪ್ರಭಾವ ಬೀರಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ನಾಡಿನ ಅನೇಕ ಪತ್ರಕರ್ತರು ಸ್ವಾಗತಿಸಿದ್ದಾರೆ. ಈ ತೀರ್ಪು ಸ್ವಾಗತಾರ್ಹವಾಗಿದೆ ಮತ್ತು ಪತ್ರಕರ್ತರಿಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದ್ದಾರೆ.
ದೇಶಕ್ಕೆ ಕಂಟಕ ಪ್ರಾಯವಾಗಿರುವವರ ವಿರುದ್ಧ, ನೈತಿಕ ಸಮರ ಸಾರುವ ನಿಷ್ಠಾವಂತ ಪತ್ರಕರ್ತರಿಗೆ ಸುಪ್ರೀಂಕೋರ್ಟ್ ತೀರ್ಪು ಶ್ರೀರಕ್ಷೆಯಾಗಿದ್ದು, ಪಾಮಾಣಿಕವಾಗಿ ಸಾಮಾಜಿಕ ಕಾಳಜಿಯಿಂದ ನಾಡಿನ ಸೇವೆ ಮಾಡಲು ಅನುಕೂಲವಾಗಲಿದೆ. ಭ್ರಷ್ಟಾಚಾರದ ವಿರುದ್ಧ, ಕಾನೂನಿನ್ವಯ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ನಾಡಿನಲ್ಲಿರುವ ಸಾಮಾಜಿಕ ಸೈನಿಕರಾಗಿದ್ದಾರೆ.