NEWSದೇಶ-ವಿದೇಶನಮ್ಮರಾಜ್ಯ

ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಅಪಘಾತ ಸಂಖ್ಯೆ ಹೆಚ್ಚಳಕ್ಕೆ ಆಕ್ರೋಶ: ಕೇಂದ್ರಕ್ಕೆ ಎರಡನೇ ಪತ್ರ ಬರೆದ ಸಾರಿಗೆ ಸಚಿವ ರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಈ ಎಲೆಕ್ಟ್ರಿಕ್ ಬಸ್ ನಿರ್ವಹಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದು, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಎರಡನೇ ಪತ್ರ ಬರೆದಿದ್ದಾರೆ.

ಬೆಂಗಳೂರಿಗರ ಪ್ರಮುಖ ಸಂಚಾರನಾಡಿಯೆಂದರೆ ಅದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳು. ಪ್ರತಿನಿತ್ಯ ಲಕ್ಷಾಂತರ ಮಂದಿ ಈ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಬಿಎಂಟಿಸಿ ನಿಗಮದಲ್ಲಿ 53 ಡಿಪೋಗಳನ್ನೂ ಸೇರಿ 6 ಸಾವಿರಕ್ಕೂ ಹೆಚ್ಚು ಬಸ್‌ಗಳಿದ್ದು, ಅದರಲ್ಲಿ ಸುಮಾರು 1,700 ಬಸ್‌ಗಳು ಎಲೆಕ್ಟ್ರಿಕ್ ಬಸ್‌ಗಳಾಗಿವೆ.

ಆದರೆ, ಇತ್ತೀಚಿನ ದಿನಗಳಲ್ಲಿ ಇವಿ ಬಸ್‌ಗಳಿಂದ ಅತೀ ಹೆಚ್ಚಾಗಿ ಅಪಘಾತಗಳು, ಬ್ರೇಕ್ ಫೇಲ್‌ಗಳಾಗುತ್ತಿವೆ. ಈ ಬಸ್‌ಗಳನ್ನು ಕೇಂದ್ರ ಸರ್ಕಾರದ ಸೂಚನೆಯಂತೆ ಜಿಸಿಸಿ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳಿಂದ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ಓಡಿಸುತ್ತಿದೆ. ಈ ಬಸ್‌ಗಳಲ್ಲಿ ಡ್ರೈವರ್‌ಗಳನ್ನು ಕಂಪನಿಯೇ ತುಂಬಿಕೊಳ್ಳುತ್ತಿದೆ.

ಹೀಗಾಗಿ ಅಪಘಾತ ಮಾಡಿದ ಚಾಲಕರ ವಿರುದ್ಧವೂ ಯಾವುದೇ ಕ್ರಮವಾಗುತ್ತಿಲ್ಲ. ಜತೆಗೆ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ ಕೊರತೆಯಿಂದ, ಬ್ಯಾಟರಿ ಸಮಸ್ಯೆಯಿಂದ ನಿಗಮದ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ ಎಂದು ಸಾರಿಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಹೆಚ್ಚಾಗಿ ಬ್ರೇಕ್ ಡೌನ್ ಆಗುತ್ತಿವೆ. ಇವಿ ಬಸ್‌ಗಳು ಒಂದು ದಿನಕ್ಕೆ 200 ಕಿಲೋಮೀಟರ್ ಓಡಬೇಕು ಅಂತಾ ಇದೆ. ಆದರೆ 100-120 ಕಿಲೋಮೀಟರ್ ಮಾತ್ರ ಬ್ಯಾಟರಿ ಬರುತ್ತಿದೆ. ಪದೇಪದೆ ಕೆಟ್ಟು ನಿಲ್ಲುತ್ತಿವೆ ಎಂದು ಸಚಿವರು ಕಿಡಿಕಾರಿದ್ದಾರೆ.

ಅಲ್ಲದೆ 5-6 ತಿಂಗಳ ಹಿಂದೆ ಎಲೆಕ್ಟ್ರಿಕ್ ಬಸ್ ನಿರ್ವಹಣೆ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದೆ. ಆದರೆ, 45 ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿದ ಅವರು ಬಳಿಕ ಯಾವುದೇ ಉತ್ತರವನ್ನು ಕೊಟ್ಟಿಲ್ಲ ಕೆಲಸವೂ ಆಗಿಲ್ಲ. ಹೀಗಾಗಿ ಎರಡನೇ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಹಲವು ಪ್ರಯಾಣಿಕರಿಗೆ ಗಂಭೀರ ಗಾಯ BMTC ಮೆಜೆಸ್ಟಿಕ್: ಪ್ಲಾಟ್‌ಫಾರಂ-10ರಲ್ಲಿ ಸೂಪರ್‌ ಟಾಕೀಸ್‌ಆದ ಸುಜಾತಾ ಟಾಕೀಸ್‌; ಅತೀ ಚಿಕ್ಕದಾಗಿ ಕಾಣುವ ಅಕ್ಷರಗಳು ಸಾಂಸ್ಕೃತಿಕ ನಗರಿ ಮೈಸೂರು: ವಿದೇಶಿಗರ ಸೆಳೆಯುವ ಪ್ರವಾಸಿ ತಾಣಗಳ ಮಹತ್ವ..! ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು: ಚಾಲಕನಿಗೆ ಗಂಭೀರ ಗಾಯ KSRTC: ವಿದ್ಯಾರ್ಥಿಗಳ ಬಸ್ ಪಾಸ್ ಮಾನ್ಯತಾ ಅವಧಿ ಏ.10ರವರೆಗೆ ವಿಸ್ತರಿಸಿ ಆದೇಶ ಬಟ್ಟೆ ಬ್ಯಾಗ್‌ ಖರೀದಿ ಅವ್ಯವಹಾರ ಪ್ರಕರಣ: ರೋಹಿಣಿ ಸಿಂಧೂರಿಗೆ ಸಂಕಷ್ಟ NWKRTC ಹಾವೇರಿ: ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್‌ ಪ್ಲಾಟ್‌ಫಾರಂನಲ್ಲಿ ನಿಂತಿದ್ದವರಿಗೆ ಡಿಕ್ಕಿ- ಮಗು ಸಾವು ಗ್ಯಾಸ್‌ ಸಿಲಿಂಡರ್‌ಗೆ 195.50 ರೂ ಏರಿಕೆ: ಶಾಕ್‌ಕೊಟ್ಟ ಕೇಂದ್ರ ಸರ್ಕಾರ KSRTC: ಏ.6ರ ಸಭೆಯಲ್ಲಿ ನೌಕರರ ಬೇಡಿಕೆ ಈಡೇರದಿದ್ದರೆ 8ರಿಂದ ಪಾದಯಾತ್ರೆ, 21ರಿಂದ ಆಮರಣಾಂತ ಉಪವಾಸ -ಕೂಟದ ಸಭೆಯಲ್ಲಿ ನ... ಡೀಸೆಲ್‌ ಟ್ಯಾಂಕರ್‌-ಕಾರಿನ ನಡುವೆ ಭೀಕರ ಅಪಘಾತ: ತಪ್ಪಿದ ಭಾರಿ ದುರಂತ