NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ 2ನೇ ದಿನದ ಪಾದಯಾತ್ರೆ: 30 ಕಿಮೀ ನಡಿಗೆ ಯಶಸ್ವಿ- ಹಿರಿಯೂರಿನಲ್ಲಿ ವಾಸ್ತವ್ಯ

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ: ನಿನ್ನೆ ಬುಧವಾರ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡ ಸಾರಿಗೆ ನೌಕರರ ಪಾದಯಾತ್ರೆ 18 ಕಿಲೋ ಮೀಟರ್‌ ಕ್ರಮಿಸುವ ಮೂಲಕ ಮೊದಲ ದಿನ ಭಾರಿ ಯಶಸ್ವಿಗೊಂಡಿತ್ತು.

ಆ ಬಳಿಕ ರಾತ್ರಿ ಬುರುಜನರೊಪ್ಪ ಗ್ರಾಮದ ಶ್ರೀ ರಕ್ಷಾ ಗಣಪತಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿತ್ತು. ಇಂದು (ಗುರುವಾರ) ಏ.9ರಂದು ಬೆಳಗ್ಗೆ 6 ಗಂಟೆಗೆ ಎರಡನೇ ದಿನದ ಜಾಥಾ ದೇವಸ್ಥಾನದಿಂದ ಆರಂಭವಾಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಒಕ್ಕೂಟ ವತಿಯಿಂದ ಬುಧವಾರ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಬೆಂಗಳೂರಿನತ್ತ ಪಾದಯಾತ್ರೆ ಆರಂಭಿಸಿದರು.

ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ಮಾತನಾಡಿ, ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳ ಕುರಿತು ಈಗಾಗಲೇ ಹಲವು ಬಾರಿ ಶಾಂತಿಯುತ ಹೋರಾಟಗಳನ್ನು ನಡೆಸಲಾಗಿದೆ. ಸರ್ಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸಿ, ಮುಖ್ಯಮಂತ್ರಿ, ಸಾರಿಗೆ ಸಚಿವರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಹಲವು ಸುತ್ತಿನ ಸಭೆಗಳು ನಡೆದಿದ್ದರೂ ಯಾವುದೇ ಸ್ಪಷ್ಟ ಪರಿಹಾರ ದೊರಕಿಲ್ಲ’ ಹೀಗಾಗಿ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದು 2ನೇ ದಿನವಾದ ಇಂದು ಹಿರಿಯೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮೇಟಿಕುರ್ಕಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಗ್ರಾಮಸ್ಥರೇ ಪಾದಯಾತ್ರೆ ಆಮಾಡುತ್ತಿರುವ ನೌಕರರ ಬಳಿ ಬಂದು ಅವರಿಗೆ ಕಾಫಿ ಟೀ ವ್ಯವಸ್ಥೆ ಮಾಡಿಕೊಟ್ಟಿ ಹೋರಾಟಕ್ಕೆ ಶುಭಕೋರಿದರು. ಇನ್ನು ಇದಕ್ಕೂ ಮೊದಲು , ಟೋಲ್‌ ಬಳಿ ಸಾರ್ವಜನಿಕರು ನೋವು ನಿವಾರಕ ಪರಿಕರಗಳು ಸೇರಿ ಇತರೆ ತಿನಿಸುಗಳನ್ನು ಕೊಡುವ ಮೂಲಕ ಔದಾರ್ಯ ತೋರಿದ್ದು ಅಲ್ಲದೆ ನೌಕರರು ಬಿರುಬಿಸಿಲನ್ನು ಲೆಕ್ಕಿಸದೆ ಮಾಡುತ್ತಿರುವ ಪಾದಯಾತ್ರೆ ನೋಡಿ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು 2ನೇ ದಿನವಾದ ಇಂದು ಸುಮಾರು 30 ಕಿಲೋ ಮೀಟರ್‌ ಪಾದಯಾತ್ರೆ ಸಾಗಿದ್ದು, ಒಟ್ಟಾರೆ 48 ಕಿಮೀ ಈಗಾಗಲೇ ಪಾದಯಾತ್ರೆ ಮಾಡಿದ್ದಾರೆ. ಇನ್ನು ರಾತ್ರಿ ಮಲಗುವ ವೇಳೆ ಈ ಪಾದಯಾತ್ರಿಗಳಿಗೆ ಎಷ್ಟು ಕಾಲು ನೋವು ಬಂದಿರುತ್ತದೋ ಗೊತ್ತಿಲ್ಲ. ಆದರೆ ಇವರ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸರ್ಕಾರ ಸ್ಪಂದಿಸಿ ಬೇಡಿಕೆ ಈಡೇರಿಸಲಿ ಎಂದು ನಾವು ಕೂಡ ಆಗ್ರಹಿಸುತ್ತೇವೆ ಎಂದು ಮೇಟಿಕುರ್ಕಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.

ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ನೀಡಬೇಕು ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಜಟಾಪಟಿ ಗೋಜು ಗೊಂದಲಗಳಿಗೆ ಮುಕ್ತಿಯಾಡಬೇಕು. ಅಲ್ಲದೆ ಕಾಂಗ್ರೆಸ್‌ ಪಕ್ಷ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಸಾರಿಗೆ ನೌಕರರಿಗೆ ಕೊಟ್ಟಿರುವ ಪ್ರಣಾಳಿಕೆ ಭರವಸೆಯನ್ನು ಈಡೇರಿಸಬೇಕು ಹಾಗೂ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡಲೇ ಬೇಕು ಜತೆಗೆ ಸಂಘಟನೆಗಳ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ.

Megha
the authorMegha

Leave a Reply

error: Content is protected !!
Latest news
ಭಟ್ಕಳ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ ಒಂದೇ ಕುಟುಂಬದ 8 ಮಂದಿ ಮೃತ- ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು! ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿಗಾಗಿ ಪತ್ರ ಚಳವಳಿಗೆ ಮುಂದಾದ ಸಾರಿಗೆ ನೌಕರರು: ಹೈ ಕೋರ್ಟ್‌ ಸಿಜೆಗೆ ಲೆಟರ್ ಬರೆಯಲು ... ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ... ಬಿಎಂಟಿಸಿ ಹೊಸ ವೇಗದೂತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು ನಿವೇಶನ ರಹಿತ 500 ಬಡ ಕುಟುಂಬಗಳಿಗೆ ಜೂನ್ ತಿಂಗಳಲ್ಲಿ ನಿವೇಶನ ವಿತರಣೆ: ಸಚಿವ ಮುನಿಯಪ್ಪ