NEWSನಮ್ಮರಾಜ್ಯ

ಸಾರಿಗೆ ನೌಕರರಿಗೆ ಸಮಾನ ವೇತನ ಸೇರಿದಂತೆ 3 ಬೇಡಿಕೆಗಳ ಈಡೇರಿಕೆಗೆ ಕೂಟ ಒತ್ತಾಯ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ಗೆ ಮನವಿ ಸಲ್ಲಿಕೆ

ಕೂಟದ ಪದಾಧಿಕಾರಿಗಳ ಮನವಿ ಪತ್ರವನ್ನು ಸ್ವೀಕರಿಸಿದ ಹರಿಪ್ರಸಾದ್ ಅವರು ನಮ್ಮ ಪಕ್ಷ ಚುನಾವಣಾ ಪೂರ್ವ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ನೀಡುವ ಬಗ್ಗೆ ಚರ್ಚಿಸಿ ಅತೀ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ

ನೊಂದವರಿಗೆ ಹೆಗಲು

ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಸಾರಿಗೆ ನೌಕರರಿಗೆ ಸಮಾನ ವೇತನ ಘೋಷಣೆ ಮಾಡಿದ್ದಂತೆ. ಪ್ರಣಾಳಿಯಲ್ಲಿರುವ ವಿಷಯವನ್ನು ತುರ್ತಾಗಿ ಕಾರ್ಯರೂಪಕ್ಕೆ ತಂದು ವೇತನದಲ್ಲಿ ಆಗಿರುವ ತಾರತಮ್ಯ ಸರಿಪಡಿಸಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಪ್ರೊ.ಕೆ.ಈ. ರಾಧಾಕೃಷ್ಣ ಅವರ ನೇತೃತ್ವದಲ್ಲಿ, ಬಿಎಂಟಿಸಿ ಅಧ್ಯಕ್ಷ ಆರಾಧ್ಯ ಅವರ ಉಪಸ್ಥಿತಿಯಲ್ಲಿ ಬುಧವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಹರಿಪ್ರಸಾದ ಅವರನ್ನು ಭೇಟಿಯಾದ ಕೂಟದ ನಿಯೋಗ ಪ್ರಮುಖವಾಗಿ ಮೂರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿತು.

ಸರ್ಕಾರ ಚುನಾವಣಾ ಪೂರ್ವ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗದ ಮಾದರಿಯಲ್ಲಿ) 01/01/2024 ರಿಂದ ಜಾರಿಗೆ ಬರುವಂತೆ ಕೊಡಬೇಕು.

ಇನ್ನು 01/01/2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಆ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡಬೇಕು (ಈಗಾಗಲೇ ಸರ್ಕಾರ 26 ತಿಂಗಳ ವೇತನ ಹಿಂಬಾಕಿ ನೀಡುವ ಸುತ್ತೋಲೆ ಹೊರಡಿಸಿದ್ದು ಬಾಕಿ 12 ತಿಂಗಳ ವೇತನ ಹಿಂಬಾಕಿಯನ್ನು ಸರ್ಕಾರ ಅಥವಾ ಸಂಸ್ಥೆಯಿಂದ ಭರಿಸಬೇಕು.)

ಕೊನೆಯದಾಗಿ ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ, ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಈ ಕೂಡಲೇ ನಡೆಸಲು ತಾವು ಮನಸ್ಸು ಮಾಡಬೇಕು ಈ ನಿಟ್ಟಿನಲ್ಲಿ ನಿಮ್ಮ ಪಕ್ಷದ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಿಯೋಗದಲ್ಲಿದ್ದ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಲ್ಲರ ಪರವಾಗಿ ಮನವಿ ಮಾಡಿದರು.

ಕೂಟದ ಪದಾಧಿಕಾರಿಗಳ ಮನವಿ ಪತ್ರವನ್ನು ಸ್ವೀಕರಿಸಿದ ಹರಿಪ್ರಸಾದ್ ಅವರು ನಮ್ಮ ಪಕ್ಷ ಚುನಾವಣಾ ಪೂರ್ವ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ನೀಡುವ ಬಗ್ಗೆ ಚರ್ಚಿಸಿ ಅತೀ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಚಂದ್ರು ತಿಳಿಸಿದ್ದಾರೆ.

ಮನವಿ ಪತ್ರದಲ್ಲೇನಿದೆ?: ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಪ್ರತಿದಿನ ಒಂದು ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಲು ಸರಿಸುಮಾರು 1.06 ಲಕ್ಷ (ಒಂದು ಲಕ್ಷ ಆರು ಸಾವಿರ ನೌಕರರು ಕರ್ತವ್ಯ ನಿರ್ವಾಹಿಸುತ್ತಿದ್ದಾರೆ. ನಾವೆಲ್ಲ ಹಬ್ಬ-ಹರಿದಿನಗಳಲ್ಲಿ ಕುಟುಂಬ ಸದಸ್ಯರೊಂದಿಗೆ ಇರಲು ಆಗದೆ, ಮಳೆ-ಗಾಳಿ-ಬಿಸಿಲು ಎನ್ನದೆ ಅತೀ ಒತ್ತಡದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದೇವೆ.

ಆದರೆ, ನಮಗೆ ಸರ್ಕಾರಿ ಮತ್ತು ಇತರೆ ನಿಗಮ ಮಂಡಲಿಗಳ ನೌಕರರ ವೇತನಕ್ಕೆ ಹೋಲಿಕೆ ಮಾಡಿದರೆ ಸಿಗುವ ವೇತನ ಅತೀ ಕಡಿಮೆ ಮತ್ತು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ನಾವು ಕಾಯ-ವಾಚ-ಮನಸ ದುಡಿಯುವ ಕಾರಣದಿಂದಲೇ ಸಂಸ್ಥೆಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿವೆ.

ಇನ್ನು ಕಳೆದ 40 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಪ್ರತಿ ನಾಲ್ಕೂ ವರ್ಷಕ್ಕೆ ಒಮ್ಮೆ ನಡೆಯುತ್ತಿರುವ ಅವೈಜ್ಞಾನಿಕ ವೇತನ ಪರಿಷ್ಕರಣೆಯಿಂದ ಬೇಸತ್ತ ಸಾರಿಗೆ ನೌಕರರು ಬುದ್ಧ ಬಸವಣ್ಣ- ಅಂಬೇಡ್ಕರ್ ವಿಚಾರದಂತೆ ಸಮಾನ ಕೆಲಸಕ್ಕೆ, ಸಮಾನ ವೇತನ ಮತ್ತು ಸೌಲಭ್ಯಗಳಿಗಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಹೋರಾಟ ಮಾಡಿದ ಸಂಧರ್ಭದಲ್ಲಿ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸುವ ಬದಲು ಹೋರಾಟವನ್ನು ಹತ್ತಿಕ್ಕಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಉಪಯೋಗಿಸುವಂತೆ ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಮತ್ತು ಅಮಾನತು ಮಾಡಿತ್ತು.

ಆದರೂ ಸಾರಿಗೆ ನೌಕರರು ಎದೆಗುಂದದೆ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು. ಅವರ ಅಧಿಕಾರವಧಿ ಮುಗಿದ ತಕ್ಷಣ ಯಾವಾಗ ಕಾಂಗ್ರೆಸ್ ಪಕ್ಷ ಸಾರಿಗೆ ನೌಕರರಿಗೆ, ಸರ್ಕಾರಿ ನೌಕರರಿಗೆ ಇರುವ ಸರಿಸಮಾನ ವೇತನ ಮತ್ತು ಸೌಲಭ್ಯಗಳನ್ನು ನೀಡುವ ಪ್ರಣಾಳಿಕೆ ಭರವಸೆಯನ್ನು ನೀಡಿದಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಹಲವು ವರ್ಷಗಳ ನ್ಯಾಯಯುತ ಬೇಡಿಕೆ ಈಡೇರುವ ಭರವಸೆಯಿಂದ ನಾವು ನಮ್ಮ ಕುಟುಂಬ ಸದಸ್ಯರು, ಬಂದುಬಳಗ ಮತ್ತು ಕರ್ತವ್ಯ ಸಮಯದಲ್ಲಿ ಪ್ರಯಾಣಿಕರಿಗೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ವಿನಂತಿಸಿ, ಸಾರಿಗೆ ನೌಕರರು ಮಾಡಿದ ಅಳಿಲು ಪ್ರಯತ್ನದಿಂದ ನಮ್ಮೆಲ್ಲರ ಮಹಾದಾಸೆಯಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ.

ಇನ್ನು ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾಂದ ಶಕ್ತಿ ಯೋಜನೆಯನ್ನು ಜಾರಿಗೆ ತರುವ ಸಂಧರ್ಭದಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಬಸ್ಸುಗಳ ಮತ್ತು ನೌಕರರ ಕೊರತೆ ಇದ್ದರೂ ಸಾರಿಗೆ ನೌಕರರು ಕಷ್ಟ ಪಟ್ಟು ದುಡಿದ ಪರಿಣಾಮ ಇಂದು ಶಕ್ತಿ ಯೋಜನೆಯಲ್ಲಿ ನೂರಾರು ಕೋಟಿಗಳ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿರುವ ದಾಖಲೆಯು ಸಹ ನಿರ್ಮಾಣವಾಗಿರುವ ಜತೆಗೆ ಸರ್ಕಾರಕ್ಕೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಯೋಜನೆ ಎಂದರೆ ಶಕ್ತಿ ಯೋಜನೆ.

ನುಡಿದಂತೆ ನಡೆಯುವ ಸರ್ಕಾರವೆಂದು ಹೇಳಿಕೊಳ್ಳುವ ತಾವುಗಳು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿದ್ದು ಇದುವರೆಗೂ ಮುಖ್ಯಮಂತ್ರಿಗಳ, ಸಾರಿಗೆ ಸಾರಿಗೆ ಸಚಿವರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಜತೆಗೆ ಸರಣಿ ಸಭೆಗಳು ನಡೆದಿವೆ. ಆದರೆ, ಸಾರಿಗೆ ನಿಗಮಗಳ ಬಹುತೇಕ ನೌಕರರ ಬೇಡಿಕೆಯಾದ ಪ್ರಣಾಳಿಕೆ ಭರವಸೆಯಂತೆ ಸರಿ ಸಮಾನ ವೇತನ ನೀಡುವ ಬದಲು, ಏಕಪಕ್ಷಿಯವಾಗಿ ಶೇಕಡ 12.5 ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. (01/01/2024 ರ ಬದಲಿಗೆ 01/04/2025 ರಿಂದ ಅನ್ವಯವಾಗುವಂತೆ) ವೇತನ ಹಿಂಬಾಕಿಯಲ್ಲೂ ತಾರತಮ್ಯ ಮಾಡಲಾಗಿದೆ.

ಸರ್ಕಾರದ ಈ ನಡೆಯಿಂದ ಸಾರಿಗೆ ನೌಕರರಿಗೆ ಬಾರಿ ನಿರಾಸೆಯಾಗಿದೆ. ಇದರಿಂದ ಸಾರಿಗೆ ನೌಕರರು ತಮ್ಮ ದಿನ ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಇತರೆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾದ್ಯವಾಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಾವು ಮುಖ್ಯಮಂತ್ರಿಗಳ ಬಳಿಯಲ್ಲಿ ಚರ್ಚಿಸಿ ಸಾರಿಗೆ ನೌಕರರಿಗೆ ಚುನಾವಣೆ ಪೂರ್ವ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ ಮತ್ತು ಸಮಸ್ಯೆಗಳ ನಿವಾರಣೆ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಸಮಸ್ತೆ ಸಾರಿಗೆ ನೌಕರರ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಾರೆ.

Deva
the authorDeva

Leave a Reply

error: Content is protected !!
Latest news
KSRTC: 'ಸಾರಿಗೆ ಮಿತ್ರ' ಆಪ್ ದುರುಪಯೋಗ- ಕರ್ತವ್ಯಕ್ಕೆ ಹಾಜರಾಗದೆ ಸಹೋದ್ಯೋಗಿಗೆ ಫೋನ್‌ ಕೊಟ್ಟು ಹಾಜರಿ ಪಡೆಯುತ್ತಿರುವ... ಸಾರಿಗೆ ನೌಕರರಿಗೆ ಸಮಾನ ವೇತನ ಸೇರಿದಂತೆ 3 ಬೇಡಿಕೆಗಳ ಈಡೇರಿಕೆಗೆ ಕೂಟ ಒತ್ತಾಯ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ಗೆ ಮ... ಗುಟ್ಕಾ ಉಗಿಯಲು ಬಗ್ಗಿದ ವಿದ್ಯಾರ್ಥಿ ತಲೆಗೆ ಬಡಿದ ಟಿಪ್ಪರ್: ಕ್ಷಣಾರ್ಧದಲ್ಲೇ ರುಂಡ ಕಟ್‌, ಬಸ್ಸಿನಲ್ಲಿ ನೇತಾಡಿದ ಮುಂಡ... KSRTC: ನೌಕರರ ಹೆಚ್ಚಳದ ಶೇ.12.5ರಷ್ಟು ವೇತನ ಜುಲೈ ಅಂದರೆ ಈ ತಿಂಗಳ ವೇತನದಲ್ಲಿ ಅನುಷ್ಠಾನ- ಆಗಸ್ಟ್‌ನಲ್ಲಿ ಎಲ್ಲರ ಖಾತ... NWKRTC: ವಿದ್ಯಾರ್ಥಿಗಳ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ- ನಿಗಮದ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ ಇಂದಿನಿಂದ ಎರಡು ತಿಂಗಳ ಕಾಲ: ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕೆ ಬರಲಿದ್ದಾರೆ ಇಲಾಖಾ ಸಿಬ್ಬಂದಿ KSRTC: 50 ಹೊಸ ಬಸ್ ನೀಡಿ ಜತೆಗೆ ಆರ್‌ಟಿಒ ಕಚೇರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ: ಸಾರಿಗೆ ಸಚಿವರಿಗೆ ರಾಜಣ್ಣ ಮ... ದಂಪತಿಗಳ ಏಕಾಂತದಿಂದ ಕಾಂತಿಯುತ ತ್ವಚೆ, ಯುವಕರಾಗಿಡುವ ಮೋಡಿ ಅಡಗಿದೆ! ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! 2028ರ ವೇಳೆಗೆ ಮಾದಕ ವಸ್ತು- ನಶೆ ಮುಕ್ತ ಕರ್ನಾಟಕವೇ ನಮ್ಮ ಗುರಿ: ಸಿಎಂ ಡಿಕೆಶಿ