NEWSನಮ್ಮರಾಜ್ಯ

ಜುಲೈ: ಕರೆಂಟ್‌ ಮೀಟರ್ ರೀಡಿಂಗ್ ಇರಲ್ಲ -ಸರಾಸರಿ ಬಿಲ್‌ SMS ಮೂಲಕ ಬರುತ್ತದೆ!

ಬಿಲ್ ಲೆಕ್ಕಾಚಾರ ಹೇಗೆ?: ಗ್ರಾಹಕರ ಕಳೆದ 3 ತಿಂಗಳ ವಿದ್ಯುತ್ ಬಳಕೆಯ ಪ್ರಮಾಣವನ್ನು (Units) ಆಧಾರವಾಗಿಟ್ಟುಕೊಂಡು ಈ ಸರಾಸರಿ ಬಿಲ್ ಸಿದ್ಧಪಡಿಸಲಾಗುತ್ತದೆ. ನಿಮ್ಮ ಹಿಂದಿನ ಮೂರು ತಿಂಗಳ ಬಳಕೆಯ ಸರಾಸರಿ ಎಷ್ಟು ಬರುತ್ತದೆಯೋ, ಅಷ್ಟೇ ಮೊತ್ತದ ಬಿಲ್ ಈ ತಿಂಗಳು ಅನ್ವಯವಾಗಲಿದೆ.

ನೊಂದವರಿಗೆ ಹೆಗಲು

ಬೆಂಗಳೂರು: ಗೃಹ ಜ್ಯೋತಿ ಮನೆ ಮನೆ ಪರಿಶೀಲನೆಗೆ ಬೆಸ್ಕಾಂ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಹೀಗಾಗಿ ಮೀಟರ್ ರೀಡರ್‌ಗಳು ಮನೆ-ಮನೆ ಸಮೀಕ್ಷೆಯಲ್ಲಿ ಬ್ಯುಸಿಯಾಗಿರುವುದರಿಂದ, ಜುಲೈ ತಿಂಗಳಿನಲ್ಲಿ ಎಂದಿನಂತೆ ನಡೆಯುತ್ತಿದ್ದ ನಿಯಮಿತ ಮೀಟರ್ ರೀಡಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

ಹೌದು! ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯಕ್ಕೆ ಬೆಸ್ಕಾಂ ಮಹತ್ವದ ಹೆಜ್ಜೆ ಇಟ್ಟಿದೆ. ಈ ವಿಶೇಷ ತಪಾಸಣಾ ಕಾರ್ಯಕ್ಕಾಗಿ ಬೆಸ್ಕಾಂನ ಇಡೀ ಮೀಟರ್ ರೀಡರ್‌ ಸಿಬ್ಬಂದಿ ವರ್ಗವನ್ನು ನಿಯೋಜಿಸಿದೆ.

ಹೀಗಾಗಿಯೇ ಮೀಟರ್ ರೀಡರ್‌ಗಳು ಮನೆ-ಮನೆ ಸಮೀಕ್ಷೆಯಲ್ಲಿ ಬ್ಯುಸಿಯಾಗಿದ್ದು, ಜುಲೈ ತಿಂಗಳ ಮೀಟರ್ ರೀಡಿಂಗ್ ಪ್ರಕ್ರಿಯೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊಸ ಮಾದರಿಯಲ್ಲಿ ಬಿಲ್ ತಲುಪಿಸಲು ಬೆಸ್ಕಾಂ ನಿರ್ಧರಿಸಿದೆ.

ಜುಲೈ ತಿಂಗಳಿನ ವಿದ್ಯುತ್ ಬಳಕೆಗೆ ನೈಜ ರೀಡಿಂಗ್ ಬದಲಾಗಿ, ಗ್ರಾಹಕರಿಗೆ ‘ಸರಾಸರಿ ಬಿಲ್’ (Average Bill) ನೀಡಲಾಗುತ್ತದೆ. ಕೌಂಟರ್‌ಗಳಲ್ಲಿ ಅಥವಾ ಮನೆ ಬಾಗಿಲಿಗೆ ಬಂದು ಬಿಲ್ ನೀಡುವ ವ್ಯವಸ್ಥೆಯಲ್ಲಿ ಈ ತಿಂಗಳು ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

ಬಿಲ್ ಲೆಕ್ಕಾಚಾರ ಹೇಗೆ?: ಗ್ರಾಹಕರ ಕಳೆದ 3 ತಿಂಗಳ ವಿದ್ಯುತ್ ಬಳಕೆಯ ಪ್ರಮಾಣವನ್ನು (Units) ಆಧಾರವಾಗಿಟ್ಟುಕೊಂಡು ಈ ಸರಾಸರಿ ಬಿಲ್ ಸಿದ್ಧಪಡಿಸಲಾಗುತ್ತದೆ. ನಿಮ್ಮ ಹಿಂದಿನ ಮೂರು ತಿಂಗಳ ಬಳಕೆಯ ಸರಾಸರಿ ಎಷ್ಟು ಬರುತ್ತದೆಯೋ, ಅಷ್ಟೇ ಮೊತ್ತದ ಬಿಲ್ ಈ ತಿಂಗಳು ಅನ್ವಯವಾಗಲಿದೆ.

ಎಸ್ಎಮ್ಎಸ್ ಮೂಲಕ ಬಿಲ್ ಮಾಹಿತಿ: ಜುಲೈ ತಿಂಗಳ ಸರಾಸರಿ ಬಿಲ್ ಸಿದ್ಧವಾದ ತಕ್ಷಣ, ಅದನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ಕಳುಹಿಸಲಾಗುವುದು. ಗ್ರಾಹಕರು ತಮ್ಮ ಮೊಬೈಲ್ ಸಂದೇಶದ ಆಧಾರದ ಮೇಲೆಯೇ ಈ ತಿಂಗಳ ವಿದ್ಯುತ್ ಬಿಲ್ ಮೊತ್ತವನ್ನು ಪಾವತಿಸಬೇಕು.

ಯಾರಿಗೆ ಎಂದಿನಂತೆ ನೈಜ ಬಿಲ್ ಇರಲಿದೆ?: ಉಳಿದಂತೆ ಎಚ್‌ಟಿ (HT) ಗ್ರಾಹಕರು, 40 HP ಹಾಗೂ ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್‌ಟಿ (LT) ಗ್ರಾಹಕರು, ಸೋಲಾರ್ ರೂಫ್‌ಟಾಪ್ (SRTPV) ಗ್ರಾಹಕರು ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಎಂದಿನಂತೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆಯೇ ಬಿಲ್ ನೀಡಲಾಗುತ್ತದೆ.

ಆಗಸ್ಟ್ ತಿಂಗಳಿನಲ್ಲಿ ಹೊಂದಾಣಿಕೆ: ಒಂದು ವೇಳೆ ಜುಲೈ ತಿಂಗಳ ಸರಾಸರಿ ಬಿಲ್‌ನಲ್ಲಿ ನಿಮ್ಮ ನೈಜ ಬಳಕೆಗಿಂತ ಹೆಚ್ಚು ಅಥವಾ ಕಡಿಮೆ ವ್ಯತ್ಯಾಸಗಳಿದ್ದರೆ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ಆಗಸ್ಟ್ ತಿಂಗಳಿನಿಂದ ಎಂದಿನಂತೆ ನೈಜ ಮೀಟರ್ ರೀಡಿಂಗ್ ಆರಂಭವಾಗಲಿದ್ದು, ಆಗ ಉಂಟಾಗುವ ವ್ಯತ್ಯಾಸದ ಮೊತ್ತವನ್ನು ಮುಂದಿನ ಬಿಲ್‌ಗಳಲ್ಲಿ ಸೂಕ್ತವಾಗಿ ಹೊಂದಾಣಿಕೆ (Adjustment) ಮಾಡಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಸಹಕಾರಕ್ಕೆ ಬೆಸ್ಕಾಂ ಮನವಿ: ಮನೆ-ಮನೆಗೆ ಭೇಟಿ ನೀಡುವ ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್‌ಗಳ ಅಧಿಕೃತ ತಪಾಸಣಾ ಮತ್ತು ಪರಿಶೀಲನಾ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ವಿನಂತಿಸಿದೆ.

ಯಾವೆಲ್ಲಾ ದಾಖಲೆಗಳು ಅಗತ್ಯ?: ಗೃಹ ಜ್ಯೋತಿ ಯೋಜನೆಯ ಅರ್ಹತೆಯ ಮರುಪರಿಶೀಲನೆಗಾಗಿ ಸಿಬ್ಬಂದಿ ಮನೆಗೆ ಬಂದಾಗ ಗ್ರಾಹಕರು ಕೆಲವು ಪ್ರಮುಖ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಇದಕ್ಕಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪಾನ್ ಕಾರ್ಡ್, ಪಡಿತರ ಚೀಟಿ (ರೇಷನ್ ಕಾರ್ಡ್) ಹಾಗೂ ಜಾತಿ ಪ್ರಮಾಣ ಪತ್ರವನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿದೆ. ಆದರೆ ಇಂದು ಜಾತಿ ಪ್ರಮಾಣ ಪತ್ರ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ.

Deva
the authorDeva

Leave a Reply

error: Content is protected !!
Latest news
ಗೃಹ ಜ್ಯೋತಿಗೆ ಜಾತಿ ವಿವರ ನೀಡುವುದು ಕಡ್ಡಾಯವಲ್ಲ: ಸ್ಪಷ್ಟನೆ ನೀಡಿದ ಬೆಸ್ಕಾಂ 4ಸಾರಿಗೆ ನಿಗಮಗಳ ನೌಕರರಿಗೆ ಶೇ.12.5ರಷ್ಟು ಮೂಲ ವೇತನ ಹೆಚ್ಚಳ ಜುಲೈ ವೇತನದಲ್ಲಿ ಅನುಷ್ಠಾನ: KSRTC ಎಂಡಿ ಅಧಿಕೃತ ಆದೇಶ ಹೊಸ EPS ಪಿಂಚಣಿ ಯೋಜನೆ ಜಾರಿ: ಕನಿಷ್ಠ ಪಿಂಚಣಿ 7500ರೂ. ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆ- ಸಿಕ್ಕಿದ್ದು ಅದೇ ಒಂ... ಬಾಡಿಗೆದಾರರಿಗೆ ಗೃಹಜ್ಯೋತಿ' ತಂದ ಟೆನ್ಷನ್​: ಇನ್ನು ಮುಂದೆ ಸಿಗಲ್ವಾ ಫ್ರೀ ಕರೆಂಟ್‌? ಜುಲೈ: ಕರೆಂಟ್‌ ಮೀಟರ್ ರೀಡಿಂಗ್ ಇರಲ್ಲ -ಸರಾಸರಿ ಬಿಲ್‌ SMS ಮೂಲಕ ಬರುತ್ತದೆ! KSRTC: 'ಸಾರಿಗೆ ಮಿತ್ರ' ಆಪ್ ದುರುಪಯೋಗ- ಕರ್ತವ್ಯಕ್ಕೆ ಹಾಜರಾಗದೆ ಸಹೋದ್ಯೋಗಿಗೆ ಫೋನ್‌ ಕೊಟ್ಟು ಹಾಜರಿ ಪಡೆಯುತ್ತಿರುವ... ಸಾರಿಗೆ ನೌಕರರಿಗೆ ಸಮಾನ ವೇತನ ಸೇರಿದಂತೆ 3 ಬೇಡಿಕೆಗಳ ಈಡೇರಿಕೆಗೆ ಕೂಟ ಒತ್ತಾಯ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ಗೆ ಮ... ಗುಟ್ಕಾ ಉಗಿಯಲು ಬಗ್ಗಿದ ವಿದ್ಯಾರ್ಥಿ ತಲೆಗೆ ಬಡಿದ ಟಿಪ್ಪರ್: ಕ್ಷಣಾರ್ಧದಲ್ಲೇ ರುಂಡ ಕಟ್‌, ಬಸ್ಸಿನಲ್ಲಿ ನೇತಾಡಿದ ಮುಂಡ... KSRTC: ನೌಕರರ ಹೆಚ್ಚಳದ ಶೇ.12.5ರಷ್ಟು ವೇತನ ಜುಲೈ ಅಂದರೆ ಈ ತಿಂಗಳ ವೇತನದಲ್ಲಿ ಅನುಷ್ಠಾನ- ಆಗಸ್ಟ್‌ನಲ್ಲಿ ಎಲ್ಲರ ಖಾತ... NWKRTC: ವಿದ್ಯಾರ್ಥಿಗಳ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ- ನಿಗಮದ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ