NEWSನಮ್ಮಜಿಲ್ಲೆರಾಜಕೀಯ

ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡರಿಗೆ ಎದುರಾಗಿದೆ ಸಂಕಷ್ಟ: ಪಾಲಿಕೆ ಸದಸ್ಯತ್ವ ಸ್ಥಾನ ಕಳೆದುಕೊಳ್ತಾರಾ ನೂತನ ಮೇಯರ್ ?

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮಹಾನಗರ ಪಾಲಿಕೆಯ ನೂತನ ಮೇಯರ್ ರುಕ್ಮಿಣಿ ಮಾದೇಗೌಡ ಅವರು ಆರಂಭದಲ್ಲೇ ವಿವಾದದ ಸುಳಿಗೆ ಸಿಲುಕಿದ್ದಾರೆ. ತಮ್ಮ ಪಾಲಿಕೆ ಸದಸ್ಯತ್ವ ಸ್ಥಾನ ಕುರಿತು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಎದುರಾಗಿತ್ತು. ಹೀಗಾಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನವೇ ರುಕ್ಮಿಣಿ ಅಗ್ನಿಪರೀಕ್ಷೆ ಎದುರಿಸುವಂತಾಗಿತ್ತು. ಆದರೆ ಕೋರ್ಟ್‌ ವಿಚಾರಣೆ ಮುಂದೂಡಿದ್ದರಿಂದ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

ಹೌದು! ಮೈಸೂರು ಪಾಲಿಕೆಯ ನೂತನ ಮೇಯರ್ ಆದ ಮೊದಲ ದಿನವೇ ಅಗ್ನಿಪರೀಕ್ಷೆ ಎದುರಿಸಿದ್ದಾರೆ. ವಿವಾದದ ಸುಳಿಯಲ್ಲಿ ಸಿಲುಕಿದ ಮೇಯರ್ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಗುರುವಾರ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.

ವಾರ್ಡ್ ನಂಬರ್ 36ರ ಸದಸ್ಯರಾಗಿರುವ ರುಕ್ಮಿಣಿ ಮಾದೇಗೌಡ ಚುನಾವಣೆ ವೇಳೆ ಕ್ಯಾಟಗರಿ ಬಗ್ಗೆ ತಪ್ಪು ಮಾಹಿತಿ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಬಿಸಿಎಂ(ಬಿ)ಗೆ ನಿಗದಿಯಾಗಿದ್ದ ವಾರ್ಡ್ನಲ್ಲಿ ತೆರಿಗೆ ಪಾವತಿದಾರರಾಗಿರುವ ಇವರಿಂದ ಚುನಾವಣೆ ಆಯೋಗದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಇವರು ನಗರ ನಿವಾಸಿ ಅಲ್ಲ ಅನ್ನೋ ಆರೋಪವೂ ರುಕ್ಮಿಣಿ ಮಾದೇಗೌಡರ ಮೇಲಿದೆ. ಈ ಎಲ್ಲ ಕಾರಣಕ್ಕೆ ನ್ಯಾಯಾಲಯದ ಮೊರೆಹೋಗಿದ್ದ ರಜನಿ ಅಣ್ಣಯ್ಯ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದು ಮಾಡುವಂತೆ ಮನವಿ ಮಾಡಿದ್ದರು.

ಕೆಳಹಂತದ ನ್ಯಾಯಾಲಯದಲ್ಲಿ ರುಕ್ಮಿಣಿ ಮಾದೇಗೌಡರ ಪರ ತೀರ್ಪು ಬಂದಿತ್ತು. ಇದನ್ನು ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದಾಗ ರುಕ್ಮಿಣಿ ಮಾದೇಗೌಡ ವಿರುದ್ಧ ತೀರ್ಪು ಬಂದಿತ್ತು. ಡಿಸೆಂಬರ್ 14- 2020ರಲ್ಲಿ ರುಕ್ಮಿಣಿ ಸದಸ್ಯತ್ವ ರದ್ದು ಮಾಡಲು ನ್ಯಾಯಾಲಯ ನಿರ್ದೇಶನ ನೀಡಿತ್ತು. ಅಲ್ಲದೆ ರಜನಿ ಅಣ್ಣಯ್ಯ ಅವರನ್ನು ಸದಸ್ಯೆ ಎಂದು ಘೋಷಿಸಲು ಆದೇಶಿಸಿ, ಪ್ರಮಾಣ ಪತ್ರ ನೀಡುವಂತೆ ತಿಳಿಸಿತ್ತು.

ಆನಂತರ ಇದನ್ನು ಪ್ರಶ್ನಿಸಿ ರುಕ್ಮಿಣಿ ಮಾದೇಗೌಡ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಈಗ ರುಕ್ಮಿಣಿ ಮಾದೇಗೌಡರ ವಿರುದ್ಧ ನೀಡಿರುವ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಹೈ ಕೋರ್ಟ್‌ ತಡೆ ನೀಡಿದೆ.

ಇನ್ನು ನಿನ್ನೆ ನಡೆದ ವಿಚಾರಣೆಯಲ್ಲಿ ರುಕ್ಮಿಣಿ ಮಾದೇಗೌಡರಿಗೆ ಕೊಂಚ ರಿಲೀಫ್ ಸಿಕ್ಕಿದ್ದು, ಸಮಯ ನಿಗದಿ ಪಡಿಸದೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಬಿಸಿಎಂ(ಬಿ) ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧೆ ಹಾಗೂ ನಗರವಾಸಿಯಲ್ಲ ಎಂಬ ಆರೋಪದ ಮೇಲೆ ವಿಚಾರಣೆ ನಡೆಸಿದ ಕೋರ್ಟ್ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದಿನಾಂಕ ನಿಗದಿಪಡಿಸದೆ ಮುಂದೂಡಿದೆ. ಹೀಗಾಗಿ ರುಕ್ಮಿಣಿ ಮಾದೇಗೌಡರಿಗೆ ಸ್ವಲ್ಪ ನೆಮ್ಮದಿ ನೀಡಿದೆ.

ಆದರೆ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿರುವ ಹೈಕೋರ್ಟ್‌ ಏಕ ಸದಸ್ಯ ಪೀಠದ ಮುಂದೆ ಅರ್ಜಿ ವಿಚಾರಣೆ ಮಾಡಿ, ತಪ್ಪು ಅಫಿಡೆವಿಟ್ ವಿಚಾರ ಸಾಬೀತಾದರೆ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆಯಿದೆ. ಹಾಗೇನಾದರೂ ಸದಸ್ಯತ್ವ ರದ್ದಾದರೆ ಮೇಯರ್ ಸ್ಥಾನವನ್ನು ಕಳೆದುಕೊಳ್ಳುವ ರುಕ್ಮಿಣಿ ಮಾದೇಗೌಡರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೂ ಇದೆ.

ಇನ್ನು ಮೇಯರ್‌ ಗಾದಿಗೆ ಏರಬೇಕು ಎಂದು ಹೋರಾಡಿ ಸೋತಿರುವ ಬಿಜೆಪಿ ಈ ವಿಚಾರವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಮೇಯರ್ ಗಾದಿಗೇರುವ ಆಸೆ ಹೊಂದುತ್ತಿದೆ. ಆದರೆ ಏನಾಗುತ್ತದೆ ಅನ್ನುವುದು ಈಗ ಕುತೂಹಲಕಾರಿಯಾಗಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು