ನ್ಯೂಡೆಲ್ಲಿ: ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶ ಭಾನುವಾರ (ನ. 6) ಪ್ರಕಟವಾಗಲಿದೆ. ಈ ರಾಜ್ಯಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಚುನಾವಣಾ ಫಲಿತಾಂಶವು ಹರಿಯಾಣದಲ್ಲಿನ ಕುಟುಂಬದ ಪರಂಪರೆಯಾಗಿದ್ದರೆ, ತೆಲಂಗಾಣ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಪ್ರತಿಷ್ಠೆಯ ಕದನಗಳಾಗಿವೆ.
2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೇವಲ ಒಂದೂವರೆ ವರ್ಷದ ಹಿಂದೆ ಒಂದಾಗಿರುವ ಪ್ರಾದೇಶಿಕ ಪಕ್ಷಗಳಿಗೆ ಈ ಚುನಾವಣಾ ಗೆಲುವು ನಿರ್ಣಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.
ನವೆಂಬರ್ 3ರಂದು ಹರಿಯಾಣದ ಅದ್ಮಾಪುರ್, ಗೋಪಾಲ್ಗಂ ಜ್ (ಬಿಹಾರ), ಮಹಾರಾಷ್ಟ್ರದ ಅಂಧೇರಿ (ಪೂರ್ವ), ಮುನುಗೋಡೆ (ತೆಲಂಗಾಣ), ಗೋಲಾ ಗೋಕರನಾಥ್ (ಉತ್ತರ ಪ್ರದೇಶ) ಮತ್ತು ಒಡಿಶಾದ ಧಾಮ್‌ನಗರದಲ್ಲಿ ಉಪ ಚುನಾವಣೆ ನಡೆದಿದ್ದು, ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳಾದ ತೆಲಂಗಾಣ ರಾಷ್ಟ್ರಸಮಿತಿ (ಟಿಆರ್ಎಸ್), ರಾಷ್ಟ್ರೀ ಯ ಜನತಾ ದಳ (ಆರ್ಜೆಡಿ), ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಿಜು ಜನತಾ ದಳ (ಬಿಜೆಡಿ) ನಡುವೆ ತೀವ್ರ ಸ್ಪರ್ಧೆ ಇದೆ.
ಮುನುಗೋಡೆಯಲ್ಲಿ 3 ಹಂತದ ಭದ್ರತೆ: ತೆಲಂಗಾಣದ ಮುನುಗೋಡೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಘೋಷಣೆಯ ಹಿನ್ನೆಲೆ ಮತ ಎಣಿಕೆಗಾಗಿ ಮೂರು ಹಂತದ ಭದ್ರತೆ ಒದಗಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
ಮತಗಟ್ಟೆಯ ಒಳಭಾಗದಲ್ಲಿ ಕೇಂದ್ರ ಪಡೆಗಳು ಮತ್ತು ಹೊರ ಆವರಣದಲ್ಲಿ ರಾಜ್ಯ ಪೊಲೀಸರ ಎರಡು ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿಕಾಶ್ ರಾಜ್ ತಿಳಿಸಿದ್ದಾರೆ.
ಬೆಳಗ್ಗೆ 7.30ಕ್ಕೆ ಚುನಾವಣಾ ವೀಕ್ಷಕರು, ಸ್ಪರ್ಧಿಸುವ ಅಭ್ಯ ರ್ಥಿಗಳು ಮತ್ತು ಪೋಲ್ ಏಜೆಂಟರ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರ ಗಳನ್ನು (ಇವಿಎಂ) ತೆರೆದು ಕಾರ್ಯ ಆರಂಭಿಸಿದ್ದಾರೆ ಎಂದು ಹೇಳಿದರು.
ಮತಗಳ ಎಣಿಕೆಯುನಲ್ಗೊಂ ಡದ ಅರ್ಜಲಬಾವಿಯಲ್ಲಿರುವ ತೆಲಂಗಾಣ ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಲ್ಲಿ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿದೆ” ಎಂದು ವಿಕಾಸ್ ರಾಜ್ ಹೇಳಿದರು.
30 ನಿಮಿಷಗಳ ಅಂಚೆ ಮತ ಎಣಿಕೆ ನಂತರ, ಇವಿಎಂ ಎಣಿಕೆ ಪ್ರಾರಂಭವಾಗುತ್ತದೆ. ಮತಗಳ ಎಣಿಕೆ 15 ಸುತ್ತುಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.