ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ರಾಜ್ಯಾದ್ಯಂತ ಕಳೆದ ಅ.10ರಂದು ಬಳ್ಳಾರಿಯಲ್ಲಿ ಚಾಲನೆ ನೀಡಿರುವ ಬೃಹತ್ ಸೈಕಲ್ ಜಾಥಾವು ಇಂದಿಗೆ 47ನೇ ದಿನಕ್ಕೆ ಕಾಳಿಟ್ಟಿದ್ದು ಕೋಲಾರದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ.
ಈ ಸೈಕಲ್ ಜಾಥಾ ಕಳೆದ 46ದಿನಗಳಿಂದ ಬಳ್ಳಾರಿ, ಹೊಸಪೆಟೆ, ಕಲಬುರಗಿ, ಬೀದರ್, ದಾವಣಗೆರೆ, ಚಿತ್ರದುರ್ಗ, ಹುಬ್ಬಳಿ, ವಿಜಯಪುರ, ತುಮಕೂರು ಸೇರಿದಂತೆ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಚರಿಸಿದ್ದು, ಹೋದೆಡೆಯಲ್ಲ ಜಿಲ್ಲಾಧಿಕಾರಿಗಳ ಕಚೇರಿಗೆ ಸೈಕಲ್ ಜಾಥಾದ ಜತೆಗ ಪಾದಯಾತ್ರೆಯನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದೆ.
ಇನ್ನು ಈ ಸೈಕಲ್ ಜಾಥಾ ಸಂಚರಿಸಿರುವ ಜಿಲ್ಲೆಗಳಲ್ಲಿ ಸಾರಿಗೆ ನೌಕರರು ನಾ ಆ ಸಂಘಟನೆ ಈ ಸಂಘಟನೆಯವನು ಎಂಬುದನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಒಂದೆಡೆ ಸೇರಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲೇ ಬೇಕು ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಇನ್ನು ಸೈಕಲ್ ಜಾಥಾ ಆರಂಭವಾಗಿ 47 ದಿನಗಳು ಇಂದಿಗೆ ಆಗಿದ್ದು, ಇಂದು ಕೋಲಾರದಲ್ಲಿ ಮೊದಲ ಹಂತದ ಸೈಕಲ್ ಜಾಥಾವನ್ನು ಪೂರ್ಣಗೊಳಿಸಲಾಗುವುದು. ಹೀಗಾಗಿ ನಾವು ಇಂದು ಇಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಜಾಥಾದ ರೂವಾರಿ ಮತ್ತು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ವಿಜಯಪಥಕ್ಕೆ ತಿಳಿಸಿದ್ದಾರೆ.
ಈ ಬೃಹತ್ ಸಮಾವೇಶಕ್ಕೆ ಮಠಾಧೀಶರು ಸೇರಿದಂತೆ ಹಲವಾರು ಸಂಘಟನೆಗಳ ಪ್ರಮುಖರು ಅವರ ಜತೆಗೆ ನಮ್ಮ ಸಾರಿಗೆಯ ನಾಲ್ಕೂ ನಿಗಮಗಳ ಸಾವಿರಾರು ನೌಕರರು ಭಾಗವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಇನ್ನು ಇಂದು ಕೋಲಾರದಲ್ಲಿ ನಡೆಯುತ್ತಿರುವ ಮೊದಲ ಹಂತದ ಎರಡನೆಯ ಬೃಹತ್ ಸಾರಿಗೆ ನೌಕರರ ಸಮಾವೇಶಕ್ಕೆ ಬರುವ ಸಲುವಾಗಿಯೇ ತಮ್ಮದೆ ನಿಗಮದ ಬಸ್‌ಗಳನ್ನು ಸಾರಿಗೆ ನೌಕರರು ಬುಕ್ ಮಾಡಿದ್ದು, ರಾಜ್ಯದ ವಿವಿಧ ಘಟಕಗಳಿಂದ ಬಸ್‌ಗಳು ಸಾರಿಗೆ ನೌಕರರನ್ನು ಹೊತ್ತು ಕೋಲಾರದತ್ತ ಬರುತ್ತಿವೆ ಎಂದು ಕಲಬುರಗಿಯ ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ತಮ್ಮ ದಶಕಗಳ ಬೇಡಿಕೆಗಳನ್ನು ಈಡೇರಿಸಿಕೊಳ್ಳಲೇ ಬೇಕು ಎಂದು ಪಣ ತೊಟ್ಟಿರುವ ಸಾರಿಗೆ ನೌಕರರು ತೆರೆ ಮರೆಯಲ್ಲಿ ಮತ್ತು ನೇರನೇರವಾಗಿಯೇ ಕಸಲರತ್ತು ನಡೆಸುತ್ತಿದ್ದಾರೆ. ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವುಗಳನ್ನು ಸರ್ಕಾರ ಈಡೇರಿಸಲೇ ಬೇಕು ಎಂದು ಹಲವಾರು ಮಠಾಧೀಶರು ಮತ್ತು ವಿವಿಧ ಸಂಘಟನೆಗಳು ಪ್ರಮುಖರು ಸರ್ಕಾರವನ್ನು ಒತ್ತಾಯಿಸುತ್ತಿದ್ದು, ನೌಕರರಿಗೆ ಬೆಂಬಲವನ್ನು ನೀಡುತ್ತಿದ್ದಾರೆ.
ಇಂದು ನಡೆಯುವ ಸಾರಿಗೆ ನೌಕಕರರ ಬೃಹತ್ ಸಮಾವೇಶಕ್ಕೆ ಸಾರಿವರಾರು ನೌಕರರು ಸಾಕ್ಷಿಯಾಗಿಲಿದ್ದು, ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲಿದ್ದಾರೆ.