NEWSನಮ್ಮಜಿಲ್ಲೆನಮ್ಮರಾಜ್ಯ

ಡಿ.2ರಂದು ಸಾರಿಗೆ ನೌಕರರು ಕಾನೂನು ಹೋರಾಟ ತೀವ್ರಗೊಳಿಸುವ ಕುರಿತು ತಜ್ಞ ವಕೀಲರ ಜತೆ ಸಭೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ಸಾರಿಗೆ ನೌಕರರ ಕಾನೂನು ಹೋರಾಟ ತೀವ್ರಗೊಳಿಸುವ ಚರ್ಚೆಗೆ ಸಾಧ್ಯವಾದಷ್ಟು ಸಮಸ್ತ ನೌಕರರು ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಆಹ್ವಾನಿಸಿದೆ.

ಸಭೆಯು ಡಿಸೆಂಬರ್‌ 2ರಂದು ಜೈ ಭೀಮನ್ ಭವನ ( ಪೂರ್ಣಿಮಾ ಟಾಕೀಸ್ ಹತ್ತಿರ ಲಾಲ್ ಬಾಗ್) ದಲ್ಲಿ ಮಧ್ಯಾಹ್ನ 3ಗಂಟೆಗೆ ನಡೆಯಲಿದೆ. ಈ ಸಂಬಂಧ ನೌಕರರ ಪರ ವಕಾಲತು ವಹಿಸರುವ ವಕೀಲರ ಜತೆಗೆ ಹಿರಿಯ ನುರಿತ ವಕೀಲರನ್ನು ಖುದ್ದು ಭೇಟಿ ಮಾಡಿ ಅವರನ್ನು ಸಂಘದ ಪದಾಧಿಕಾರಿಗಳು ಆಹ್ವಾನಿಸುತ್ತಿದ್ದಾರೆ.

ಇನ್ನು ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ಸಾರಿಗೆ ನೌಕರರಿಗೆ ನಾಯಾಲಯಗಳಲ್ಲಿ ನ್ಯಾಯ ಸಿಗುವುದು ವಿಳಂಬವಾಗುತ್ತಿರುವುದರಿಂದ ಮತ್ತಷ್ಟು ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದರಿಂದ ನೌಕರರು ಆತ್ಮಸ್ಥೈರ್ಯವನ್ನು ಕಳೆದುಕೊಂಡು ಮಾನಸಿಕ ಚಿಂತಗೆ ಒಳಗಾಗುತ್ತಿದ್ದಾರೆ.

ಆದುದರಿಂದ ನ್ಯಾಯಾಲಯಗಳಲ್ಲಿ ವಜಾಗೊಂಡಿರುವ ನೌಕರರ ಪ್ರಕರಣಗಳು ಯಾವ ಸ್ಥಿತಿ-ಗತಿಯಲ್ಲಿವೆ ಮತ್ತು ಶೀಘ್ರದಲ್ಲೇ ಅವರಿಗೆ ನ್ಯಾಯ ಸಿಗಲು ಪ್ರಕರಣಗಳನ್ನು ತೀವ್ರಗೊಳಿಸಲು ಏನು ಮಅಡಬೇಕು ಎಂಬುವುದರ ಬಗ್ಗೆ ಚರ್ಚಿಸಿ ತೀವ್ರ ಕಾನೂನು ಹೋರಾಟಕ್ಕೆ ತೀರ್ಮಾನಿಸಬೇಕಾಗಿದೆ.

ಹೀಗಾಗಿ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲ ವಕೀಲರನ್ನು ಈ ಸಭೆಗೆ ಅಹ್ವಾನಿಸಿದ್ದು, ತಾವು ಸಹ ಈ ಸಭೆಗೆ ಆಗಮಿಸಿ ವಜಾಗೊಂಡಿರುವ ನೌಕರರಿಗೆ ಕಾನೂನು ಅರಿವು ಮತ್ತು ಅವರಿಗೆ ಆತ್ಮಸ್ಥೆರ್ಯ ತುಂಬಬೇಕೆಂದು ಈ ಮೂಲಕ ನುರಿತ ವಕೀಲರ ಜತೆಗೆ ನೌಕರರ ಪ್ರಕರಣಕ್ಕೆ ಸಂಬಂಧಿಸಿದ ವಕೀಲರಲ್ಲಿ ಮನವಿ ಮಾಡಿದ್ದಾರೆ.

ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ್ ಅವರಿಗೆ ನೌಕರರ ಬೇಡಿಕೆ ಈಡೇರಿಕೆ ಸಂಬಂಧ ಕೆಎಸ್‌ಆರ್‌ಟಿಸಿ ಸಂಘದ ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಡಿ. ರಾಮು, ಉಪಾಧ್ಯಕ್ಷ ಎನ್. ಸುಧಾಕ ರೆಡ್ಡಿ ಖಜಾಂಚಿ ಎಚ್. ಕೆ. ಯೋಗೇಶ್, ಸಂಘಟನಾ ಕಾರ್ಯದರ್ಶಿ ಶ್ರೀಧರ್ ಎಂ. ತಹಶೀಲ್ದಾರ್ ಮನವಿ ಸಲ್ಲಿಸಿದರು.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...