NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಅಂಬಾರಿ ಉತ್ಸವ ಹೆಸರಿನ ಮಲ್ಟಿ ಆಕ್ಸೆಸ್ ಬಸ್‌ಗಳಿಗೆ ಸಿಎಂ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಒಟ್ಟು 50 ವೋಲ್ವೋ ಕಂಪನಿಯ 9600S ಮಲ್ಟಿ ಆಕ್ಸೆಸ್ ಬಸ್​ಗಳನ್ನು ಖರೀದಿ ಮಾಡಿದೆ. ಸದ್ಯ ಆ ಪೈಕಿ 20 ಬಸ್​ಗಳಿಗೆ ಇಂದು ಚಾಲನೆ ನೀಡಲಾಗಿದೆ.

ಇಂದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಿಗಮದ ಅಧ್ಯಕ್ಷ ಚಂದ್ರಪ್ಪ, ಈ ಮೂಲಕ ನಿಗಮವು ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಭಾರತದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ಹೈಟೆಕ್ ಬಸ್ ಸೇವೆಯನ್ನು ನಾಡಿನ ಜನತೆಗೆ ಪರಿಚಯಿಸಿದೆ ಎಂದರು.

ಇನ್ನು ಸದ್ಯ ಈ ಪೈಕಿ 20 ಬಸ್​ಗಳಿಗೆ ಇಂದು (ಫೆ. 21) ಚಾಲನೆ ನೀಡಲಾಗಿದ್ದು ಮುಂದಿನ ಡಿಸೆಂಬರ್ ವೇಳೆಗೆ ಉಳಿದ 30 ಬಸ್​ಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನಮ್ಮ ಸಂಸ್ಥೆ ಆರಂಭಿಸಿರುವ ಈ ಅತ್ಯಾಧುನಿಕ ಹೈಟೆಕ್ ಒಂದು ಬಸ್​ನ ಬೆಲೆ 1.70 ಕೋಟಿ ರೂ.ಗಳು! ವೋಲ್ವೋ ಕಂಪನಿ ತಯಾರಿಸಿರುವ ಈ ಬಸ್ ಇಡೀ ಭಾರತದಲ್ಲಿ ಯಾವ ಸರ್ಕಾರಿ, ಖಾಸಗಿ ನಿಗಮಗಳಲ್ಲಿಯೂ ಬಳಕೆಯಲ್ಲಿಲ್ಲ ಎಂಬುದು ವಿಶೇಷ ಎಂದು ವಿವರಿಸಿದರು.

ಈ ಹೊಸ ಬಸ್‌ಗಳಿಗೆ ನಿಗಮದಲ್ಲಿ ಅಂಬಾರಿ ಉತ್ಸವ ಎಂದು ಹೆಸರು ಇಡಲಾಗಿದೆ. 40 ಆಸನಗಳುಳ್ಳ ಪ್ರಯಾಣಿಕರು ಮಲಗುವ ಮತ್ತು ಕುಳಿತುಕೊಳ್ಳುವ ಬೆಸ್ಟ್ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯದ ಬಸ್ ಇದಾಗಿದೆ. ಪಿಯು ಫೋಮ್ ಸ್ಲೀಪರ್ ಆಸನ ಜತೆಗೆ ಬ್ಯಾಕ್ ರೆಸ್ಟ್ ಪ್ರೀಮಿಯಂ ದರ್ಜೆಯ ಅಂಬಾರಿ ಉತ್ಸವ ವಾಹನವೇ ಆಗಿದೆ ಎಂದರೆ ತಪ್ಪಾಗಲ್ಲ ಎಂದು ತಿಳಿಸಿದರು.

ರೈಲು ಮಾದರಿಯಲ್ಲಿಯೇ ಬಸ್ಸಿನ ಒಳಭಾಗದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ಬಸ್‌ಗಳು ದೂರ ಪ್ರಯಾಣಕ್ಕೆ ಬಹಳ ಅನುಕೂಲವಾಗಲಿದೆ. ಪ್ರಯಾಣಿಕರಿಗೆ ಆರಾಮದಾಯಕ ಅನುಭವ ಬಸ್ಸಿನಲ್ಲಿ ಸಿಗಲಿದೆ. ಈ ಬಸ್ಸುಗಳಿಗೆ ಪಡೆ ಅಂತ ನಾನು ಕರೆಯುತ್ತೇನೆ “ಎಂದು ಈ ಬಸ್​ಗಳಿಗೆ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ವ್ಯಾಖ್ಯಾನಿಸಿದ್ದಾರೆ.

ಬರ್ತ್ ಕ್ಯೂಬಿಕಲ್ ಇಂಟಿಗ್ರೇಟೆಡ್ ಪರಿಕರ, ರೀಡಿಂಗ್ ಲೈಟ್ಸ್, ಏರ್ ವೆಂಟ್ಸ್, USB ಪೋರ್ಟ್, ಮೊಬೈಲ್ ಹೋಲ್ಡರ್ ಸೇರಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಈ ಅಂಬಾರಿ ಉತ್ಸವ ಬಸ್ ಒಳಗೊಂಡಿದೆ. ಜತೆಗೆ 12 ಸ್ಪೀಡ್ ಐ ಶಿಫ್ಟ್ ಮೆಕ್ಯಾನಿಕಲ್ ಗೇರ್ ಬಾಕ್ಸ್, ಅಡ್ವಾನ್ಸ್ ಇಂಟೆಲಿಜೆಂಟ್ ಶಿಫ್ಟಿಂಗ್ ತಂತ್ರಜ್ಞಾನ, 9600s ಮಾದರಿಯಲ್ಲಿ ಕವಚ ಜತೆಗೆ ಸುಧಾರಿತ ಅಬ್ಸರ್ವರ್ ಸಹ ಅಂಬಾರಿ ಉತ್ಸವ ಬಸ್​ಗಳಿಗೆ ಇರಲಿದೆ ಎಂದು ತಿಳಿಸಿದರು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ