NEWSನಮ್ಮರಾಜ್ಯರಾಜಕೀಯಲೇಖನಗಳು

ಸಾರಿಗೆ ನೌಕರರ 6-7 ಬೇಡಿಕೆ ಈಡೇರಿಸಿದ್ದೀರಾ ಮುಖ್ಯಮಂತ್ರಿಗಳೆ – ಯಾವುವು ಎಂದು ವಿವರಿಸುವಿರಾ..?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಒಟ್ಟು ಸರ್ಕಾರಿ ನೌಕರರಲ್ಲಿ ಅರ್ಧದಷ್ಟು ಇರುವ ಅಂದರೆ ಸುಮಾರು 1.25 ಲಕ್ಷ ನೌಕರರಿರುವ ಸಾರಿಗೆಯ ನಾಲ್ಕೂ ನಿಗಮಗಳಿಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಳೆದ ಮೂರು ವರ್ಷದಿಂದಲೂ ಬರಿ ಹಸಿಹಸಿ ಸುಳ್ಳು ಭರವಸೆ, ಆಶ್ವಾಸನೆ ನೀಡಿಕೊಂಡೆ ಬರುತ್ತಿದೆ.

ಇನ್ನು ಇದಕ್ಕೆ ತಾಜಾ ನಿದರ್ಶನ ಎಂಬಂತೆ ನಿನ್ನೆ (ಫೆ.21) ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ಅಂಬಾರಿ ಉತ್ಸವ ಬಸ್‌ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಾಯಿಂದ ಮತ್ತದೆ ಹಸಿಸುಳ್ಳು ಹೊರಬಿದ್ದಿದೆ.

ಈಗಾಗಲೇ ನಾವು ಸಾರಿಗೆ ನೌಕರರ 6-7 ಬೇಡಿಕೆಗಳನ್ನು ಈಡೇರಿಸಿದ್ದೇವೆ, ಇನ್ನು ವೇತನ ಪರಿಷ್ಕರಣೆ ಬಗ್ಗೆ ನೌಕರರ ಮುಖಂಡರನ್ನು ಕರೆದು ಆರ್ಥಿಕ ಇತಿಮಿತಿಯೊಳಗೆ ಅದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಇಲ್ಲಿ ಅಸಲಿಗೆ ಸಾರಿಗೆ ನೌಕರರು ಇಟ್ಟಿದ್ದ ಯಾವೊಂದು ಬೇಡಿಕೆಯು ಇನ್ನೂ ಈಡೇರೆ ಇಲ್ಲ.

ಮೊದಲನೆಯದಾಗಿ ಸಾರಿಗೆ ನಿಗಮಗಳಲ್ಲಿ ಮಾನವ ಸಂಪನ್ಮೂಲ (ಎಚ್‌ಆರ್‌) ವ್ಯವಸ್ಥೆ ಮಾಡಿ ಎಂಬ ಬೇಡಿಕೆ ಇಟ್ಟಿದ್ದರು ಅದು ಈವರೆಗೂ ಜಾರಿಗೆ ಬಂದಿಲ್ಲ. ಇನ್ನು ಎನ್‌ಐಎನ್‌ಸಿ (ಹಣಪಡೆದಿಲ್ಲ ಟಿಕೆಟ್‌ ಕೊಟ್ಟಿಲ್ಲ ಎಂದರೆ ನಿರ್ವಾಹಕರಿಗೆ ದಂಡ ಹಾಕಬಾರದು) ಜಾರಿಗೆ ಬರುವ ಬದಲು ಇನ್ನು ದಂಡದ ಪ್ರಮಾಣ ಮತ್ತು ಅಮಾನತು ಶಿಕ್ಷೆ ಹೆಚ್ಚಾಗುತ್ತಿದೆ.

ಹೀಗೆ ಸಾರಿಗೆ ನೌಕರರು ಈ ಹಿಂದೆ ಇಟ್ಟಿದ್ದ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದ ಸರ್ಕಾರ ಮತ್ತು ಸಾರಿಗೆ ಸಚಿವರು ಈವರೆಗೂ ಅವುಗಳನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಿಲ್ಲ. ಅಂದು 14ರ ಡಿಸೆಂಬರ್ 2020ರಂದು ಕೊಟ್ಟ ಲಿಖಿತ ಭರವಸೆ ಈವರೆಗೂ ಈಡೇರಿಲ್ಲ.

ಕಳೆದ 202ರ ಡಿಸೆಂಬರ್‌ನಲ್ಲಿ ಸಾರಿಗೆ ನೌಕರರು ನಡೆಸಿದ ಧರಣಿ ವೇಳೆ ಸರ್ಕಾರ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದನ್ನು ಬಿಟ್ಟು ಉಳಿದ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿತ್ತು. ಅವುಗಳಲ್ಲಿ ಈಗ 6-7 ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದ್ದಾರೆ ಮುಖ್ಯಮಂತ್ರಿ ಬೊಮ್ಮಾಯಿ. ಆದರೆ ಆ ಬೇಡಿಕಗಳು ಇನ್ನೂ ಕಾನೂನಾತ್ಮಕವಾಗಿ ಜಾರಿಗೆ ಬಂದಿಲ್ಲ. ಹೀಗಾಗಿ ನಾವು ಕೇಳಿದ ಯಾವುದೇ ಪ್ರಮುಖ ಬೇಡಿಕೆಗಳನ್ನು ಇದುವರೆಗೂ ಈಡೇರಿಸಿಲ್ಲ ಎಂದು ನೌಕರರು ಹೇಳಿದ್ದಾರೆ.

ಇನ್ನು ನೆರೆಯ ಆಂಧ್ರಪ್ರದೇಶದಲ್ಲಿ ಸಾರಿಗೆ ನೌಕರರ ಮೂಲ ವೇತನ ಹೆಚ್ಚಿದೆ. ಆದರೆ ನಮ್ಮಲ್ಲಿ ಮೂಲ ವೇತನ ಶೇ. 80ರಷ್ಟು ಕಡಿಮೆ ಇದೆ. ಇನ್ನು 6ನೇ ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡುವುದಕ್ಕೆ ಮುಂದಾಗಬೇಕು ಎಂಬ ಬೇಡಿಕೆ ಈಡೇರಿಸಿಲ್ಲ. ವೇತನ ಪರಿಷ್ಕರಣೆ ಅಗ್ರಿಮೆಂಟ್ ಬಿಟ್ಟುಬಿಡಿ. ವೇತನ ಆಯೋಗ ಶಿಫಾರಸು ಮಾಡಿ ಎಂದು ನೌಕರರು ಆಗ್ರಹಿಸುತ್ತಿದ್ದಾರೆ ಆದರೆ ಈವರೆಗೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೇ ನೀಡದ ಸಿಎಂ ನಿನ್ನೆ ಠುಸ್‌ ಪಟಾಕಿ ಹಾರಿಸಿದ್ದಾರೆ.

ಸಾರಿಗೆ ನೌಕರರು ಡಿಸೆಂಬರ್‌ನಲ್ಲಿ ಇಟ್ಟಿದ್ದ ಪ್ರಮುಖ ಬೇಡಿಕೆಗಳು ಏನೇನು ಎಂಬುದನ್ನು ಇಲ್ಲಿ ನೋಡುತ್ತ ಹೋದರೆ ಮೊದಲನೆಯದು- * 6ನೇ ವೇತನ ಆಯೋಗ ಶಿಫಾರಸು ಜಾರಿ ಮಾಡಿ ಅದನ್ನು ನಾಲ್ಕು ನಿಗಮಗಳ ಸಾರಿಗೆ ನೌಕರರಿಗೆ ವಿಸ್ತರಿಸಬೇಕು ಎಂಬುದಾಗಿ. ಇದನ್ನು ಸರ್ಕಾರ ಈಡೇರಿಸಿದೆಯೇ?

ಎರಡನೆಯದು- * ಸರ್ಕಾರಿ ನೌಕರರಿಗೆ ಇರುವಂತಹ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯ ನಮಗೂ ಅನ್ವಯವಾಗುವಂತೆ ಮಾಡಲಾಗುವುದು ಎಂಬ ಬೇಡಿಕೆ ಇನ್ನು ನನೆಗುದಿಗೆ ಬಿದ್ದಿದೆ. ಆ ಬಗ್ಗೆ ಸಿಎಂ ಏನು ಕ್ರಮ ತೆಗೆದುಕೊಂಡಿದ್ದಾರೆ ಎಂಬುದು ಈವರೆಗೂ ಗೊತ್ತೆಆಗಿಲ್ಲ.

ಮೂರನೆಯದು- * ಸಾರಿಗೆ ನೌಕರರಿಗೆ ಸರ್ಕಾರಿ ಶಿಕ್ಷಕರಂತೆ ಅಂತರ ನಿಗಮ ವರ್ಗಾವಣೆ ಪದ್ಧತಿ ಜಾರಿಗೆ ತರುವ ಬೇಡಿಕೆ. ಇದು ಇನ್ನೂ ಈಡೇರಿಲ್ಲ. ಮೂರು ವರ್ಷ ಕಳೆದರೂ ಆ ಬಗ್ಗೆ ಯಾರು ನಮ್ಮ ಬಳಿ ಚರ್ಚಿಸಿಲ್ಲ. ಅದು ಏನಾಯಿತು ಎಂಬುದರ ಬಗ್ಗೆ ಇನ್ನು ಗೊಂದಲದಲ್ಲಿದ್ದೇವೆ.

ನಾಲ್ಕನೆಯದು- * ಡಿಪೋಗಳಲ್ಲಿ ಮೇಲಧಿಕಾರಿಗಳಿಂದ ನೌಕರರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಿ ಎಂಬುವುದು ಈಗ ಮತ್ತೆ ಜಾಸ್ತಿಯೇ ಆಗಿದೆ. ಇನ್ನು ಬಾಟ, ಭತ್ಯೆ ಮತ್ತು ಓಟಿ ನೀಡುವಂತೆ ಕೇಳಿದ ಬೇಡಿಕೆ ಇನ್ನೂ ಈಡೇರಿಲ್ಲ.

ಐದನೆಯದು- * ಎನ್‌ಐಎನ್‌ಸಿ ಪದ್ಧತಿ ರದ್ದು ಮಾಡುವಂತೆ ಬೇಡಿಕೆ ಇಟ್ಟಿದ್ದು ಇದುವರೆಗೂ ಏನಾಯಿತು ಅನ್ನೋದೆ ತಿಳಿದಿಲ್ಲ. ಬದಲಿಗೆ ದಂಡ ಹಾಕುವುದು ಮಾತ್ರ ಹೆಚ್ಚಗಿದೆ ಎಂದೇ ಹೇಳಬಹುದು.

ಆರನೆಯದು- *ಎಚ್ಆರ್‌ಎಂಎಸ್ ಪದ್ಧತಿ ಜಾರಿ ಮಾಡುವುದಾಗಿ ಹೇಳಿದ ಭರವಸೆ ಇನ್ನೂ ಈಡೇರಿಲ್ಲ. ಸಿಎಂ ಈ ಬಗ್ಗೆ ಮಾತೆ ಆಡುತ್ತಿಲ್ಲ.

ಏಳನೆಯದು- * ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ನೌಕರರ ಕುಟುಂಬಕ್ಕೆ 30 ಲಕ್ಷ ರೂ. ನೀಡುವುದಾಗಿ ಸರ್ಕಾರವೇ ಘೋಷಣೆ ಮಾಡಿತ್ತು. ಆದರೆ ಇನ್ನೂ ಮೃತರ ಕುಟುಂಬದವರಿಗೆ ಆ ಹಣ ಸಿಕ್ಕಿಲ್ಲ. ಅದು ಎಲ್ಲಿ ಹೋಯಿತು. ಈಗ ಅದರ ಬಗ್ಗೆ ಸಿಎಂ ಆಗಲಿ ಸಾರಿಗೆ ಸಚಿವರಾಗಲಿ ತುಟಿಯನ್ನೇ ಬಿಚ್ಚುತ್ತಿಲ್ಲ.

ಎಂಟನೆಯದಾಗಿ- *ಸಾರಿಗೆ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ಎರಡು ವರ್ಷ ತರಬೇತಿ ಅವಧಿಯನ್ನು ಒಂದು ವರ್ಷಕ್ಕೆ ಕಡಿತ ಮಾಡುವ ಬೇಡಿಕೆ ಸ್ವಲ್ಪ ಮಟ್ಟಿಗೆ ಈಡೇರಿದೆ ಎಂದರೂ ಇನ್ನೂ ಸ್ಪಷ್ಟತೆ ಇಲ್ಲ.

ಇನ್ನು ಒಂಭತ್ತನೆಯದು- * ಸರ್ಕಾರಿ ನೌಕರರಂತೆ ಪರಿಗಣಿಸಬೇಕು ಎಂಬುವುದು ಈ ಹಿಂದೆಯೇ ಕೈ ಬಿಟ್ಟು ಹೋಗಿರುವ ವಿಚಾರ. ಅಂದರೆ ಈ ಎಲ್ಲ ಬೇಡಿಕೆಗಳು ಎಲ್ಲಿ ಹೋದವು ಏನಾದವು ಎಂಬ ಬಗ್ಗೆ ಇದುವರೆಗೂ ಸಾರಿಗೆ ಅಧಿಕಾರಿಗಳಾಗಲಿ ಅಥವಾ ಸಚಿವರಾಗಲಿ ಸ್ಪಷ್ಟನೆ ನೀಡಿಲ್ಲ. ಆದರೆ ಮುಖ್ಯಮಂತ್ರಿಗಳು ಮಾತ್ರ 6-7 ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದು ಘಂಟಘೋಷವಾಗಿ ಹೇಳಿಕೆ ನೀಡುತ್ತಾರೆ.

ಸರಿ ಈ ಬೇಡಿಕೆಗಳಲ್ಲಿ ಯಾವುದನ್ನು ಈಡೇರಿಸಿದ್ದೇವೆ ಎಂಬುದನ್ನು ಸಿಎಂ ನಿನ್ನೆಯೇ ತಿಳಿಸಬುದಾಗಿತ್ತಲ್ಲ ಏಕೆ ಹೇಳಲಿಲ್ಲ. ಇದು ಜನರಿಗೆ ನಂಬಿಸಲು ಕೆಲ ಸಂಘಟನೆಗಳ ಮುಖಂಡರನ್ನು ಮೆಚ್ಚಿಸಲು ಮಾಡಿದ ಭಾಷಣವೇ ಎಂದು ನೌಕರರು ಕೇಳುತ್ತಿದ್ದಾರೆ. ಇದಕ್ಕೆ ಸಿಎಂ ಉತ್ತರ ನೀಡುವರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಾದರೂ ಈ ಸರ್ಕಾರಕ್ಕೆ ಅಲ್ಪಸ್ವಲ್ಪ ಮಾನಮರ್ಯಾದೆ ಎಂಬುವುದು ಇದ್ದರೆ ಕೂಡಲೇ ನಮ್ಮ ಬೇಡಿಕೆಗಳು ಈಡೇರಿಸಲಿ, ಇಲ್ಲ ಮತ್ತೆ ನಾವು ಮುಂದಿನ ಮಾರ್ಚ್‌ 1ರಿಂದ ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ನೌಕರರು ಸರ್ಕಾರಕ್ಕೆ ನೀಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ