NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 16-12-2019 ಹಾಗೂ 20-01-2021 ರಂದು ಒಕ್ಕೂಟ ಸಲ್ಲಿಸಿದ್ದ ಬೇಡಿಕೆಯಂತೆ ವೇತನ ಪರಿಷ್ಕರಣೆ ಮಾಡಬೇಕು : ಮಜ್ದೂರ್ ಸಂಘ ಒತ್ತಾಯ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್‌ ಅವರು ಹಲವು ಕ್ರಮಗಳನ್ನು ಜಾರಿಗೊಳಿಸಿದ್ದು, ಅದರಲು, ಒಂದೇ ಬಾರಿಗೆ ಸಾವಿರಾರು ಶಿಸ್ತು ಪ್ರಕರಣಗಳನ್ನು ಇತ್ಯರ್ಥಪಡಿಸಿ ನೌಕರರಿಗೆ ಮಾನಸಿಕವಾಗಿ ನೆಮ್ಮದಿ ನೀಡಿದ್ದಾರೆ. ಆದಾಗ್ಯೂ ತಲಮಟ್ಟದಲ್ಲಿ ಕೆಲ ಸಮಸ್ಯೆಗಳನ್ನು ನೌಕರರು ಎದುರಿಸುತ್ತಿದ್ದು, ಅಂತಹ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.

ನಿಗಮದ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳನ್ನು ಒಳಗೊಂಡಂತೆ ನಡೆದ ಸಾರಿಗೆ ನೌಕರರ ಕುಂದುಕೊರತೆ ಸಭೆಯಲ್ಲಿ ಕ.ರ.ಸಾ.ಮಜ್ದೂರ್ ಸಂಘ ಒಕ್ಕೂಟ ಪದಾಧಿಕಾರಿಗಳು ನೌಕರರ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.

1) 36 ತಿಂಗಳು ಕಳೆದರೂ 01-01-2020 ರಿಂದ ಜಾರಿಗೊಳ್ಳಬೇಕಿದ್ದ ವೇತನ ಪರಿಷ್ಕರಣೆ ಈವರೆಗೂ ಜಾರಿ ಮಾಡಿಲ್ಲ ಹಾಗೂ ಈ ಬಗ್ಗೆ ಸಾರಿಗೆ ಇಲಾಖೆಯ ಸಚಿವರು ಅಧಿಕಾರಿಗಳ ಸಭೆಗಳಲ್ಲಿ ಸೂಕ್ತ ಪ್ರಸ್ತಾವನೆಯನ್ನು ಮಂಡಿಸದೇ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಹೀಗಾಗಿ ನೌಕರರ ಸಂಕಷ್ಟಅರ್ಥೈಸಿಕೊಂಡು ಕೂಡಲೇ ವೇತನ ಪರಿಷ್ಕರಣೆಯನ್ನು 16-12-2019 ಹಾಗೂ 20-01-2021 ರಂದು ಒಕ್ಕೂಟವು ಸಲ್ಲಿಸಿದ್ದ ಬೇಡಿಕೆಯಂತೆ ಪರಿಷ್ಕರಣೆ ಮಾಡಿ ಜಾರಿಗೊಳಿಸಬೇಕು.

2) 01-7-2022 ರಿಂದ ನೀಡಬೇಕಿದ್ದ ಶೇ. 3.75 ರಷ್ಟು ತುಟ್ಟಿ ಭತ್ಯೆಯನ್ನು ಈವರೆಗೂ ನಿಗಮದ ನೌಕರರಿಗೆ ನೀಡಿಲ್ಲ.

3) 16-12-2019 ಮತ್ತು 23-12-2020 SASTಅನ್ನು ತ್ವರಿತಗತಿಯಲ್ಲಿ ಜಾರಿಗೊಳಿಸದೆ ಮೀನಮೇಷ ಎಣಿಸಲಾಗುತ್ತಿದೆ. ನಾಲ್ಕು ನಿಗಮಗಳಲ್ಲಿ ನೂತನ ವರ್ಷದ ಒಳಗೆ ಎಲ್ಲಾ ಕಾರ್ಮಿಕರ ಮತ್ತು ಕುಟುಂಬ ಸದಸ್ಯರಿಗೆ ಅನ್ವಯವಾಗುವಂತೆ ಜಾರಿಗೊಳಿಸಲು ಕ್ರಮತೆಗೆದುಕೊಳ್ಳಬೇಕು.

4) ಶಿಸ್ತು ಪ್ರಕರಣಗಳ ಇತ್ಯರ್ಥದಲ್ಲಿ ಏಕರೂಪತೆ ಇಲ್ಲ ಇದರಿಂದ ಚಾಲಕ, ನಿರ್ವಾಹಕ, ತಾಂತ್ರಿಕ ಮತ್ತು ಆಡಳತ ವರ್ಗದ ಸಿಬ್ಬಂದಿಗಳಿಗೆ ಶಿಸ್ತು ಪ್ರಕರಣಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ವಜಾಗೊಳಿಸುತ್ತಿರುವುದು ಹಾಗೂ ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತವಾಗಿ ಕಡಿತಗೊಳಿಸುವ ಮೂಲಕ ನೌಕರರ ಮೇಲೆ ಅತ್ಯಂತ ಕಠಿಣ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಆದ್ದರಿಂದ ನೌಕರರನ್ನು ವಜಾಗೊಳಿಸುವ ಮತ್ತು ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತವಾಗಿ ಶಿಕ್ಷೆಗಳನ್ನು ಏಕರೂಪ ಶಿಕ್ಷಾಪದ್ಧತಿ (ನಿರ್ದಿಷ್ಟ ಮಾರ್ಗಸೂಚಿ)ಯನ್ನು ಜಾರಿಗೊಳಸುವ ಮೂಲಕ ಶಿಸ್ತು ಪ್ರಕರಣಗಳು ಇತ್ಯರ್ಥದಲ್ಲಿ. ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಬೇಕು.

5) ಕ.ರಾ.ರ.ಸಾ.ನಿಗಮ ಮತ್ತು ಸಹೋದರ ಸಂಸ್ಥೆಗಳ ಅಧಿಕಾರಿ / ಸಿಬ್ಬಂದಿಗಳ ವಾರ್ಷಿಕ ವರ್ಗಾವಣೆಗೆ ಸಂಬಂಧಿಸಿದಂತೆ ಸುತ್ತೋಲೆ ಸಂಖ್ಯೆ 1545, ದಿನಾಂಕ : 29-04-2015 ರಲ್ಲಿ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದ್ದರೂ ನಿಗಮದ ಯಾವುದೇ ವಿಭಾಗದಲ್ಲಿ ಸದರಿ ಸತ್ತೋಲೆಯನುಸಾರ ವರ್ಗಾವಣೆ ಪ್ರಕ್ರಿಯೆ ನಡೆಸದೇ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳಿಗೆ ಅನಾನುಕೂಲವಾಗಿದೆ. ಆದ್ದರಿಂದ ಸುತ್ತೋಲೆ ಸಂಖ್ಯೆ: 1545, ದಿನಾಂಕ : 29-04-2015 ನ್ನು ಪ್ರಸಕ್ತ ಸಾಲನಿಂದಲೇ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.

6) ಚಾಲಕ, ನಿರ್ವಾಹಕ, ತಾಂತ್ರಿಕ ಹಾಗೂ ಆಡತ ವರ್ಗದ ಸಿಬ್ಬಂದಿಗಳ ವಾರ್ಷಿಕ ವರ್ಗಾವಣೆ ಸಮಯದಲ್ಲಿ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಕೌನ್ಸಿಂಗ್ ಪದ್ದತಿಯನ್ನು ಜಾರಿಗೆ ತರುವುದು ಮತ್ತು ಈ ಮೂಲಕ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರುವುದು. ವರ್ಗಾವಣೆಗೊಂಡ ನೌಕರರನ್ನು ಕಾರ್ಯಬಿಡುಗಡೆಗೊಳಸದೇ ಸತಾಯಿಸುತ್ತಿದ್ದು, ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು.

7) ನಿಗಮದ ವಿವಿಧ ವಿಭಾಗಗಳಿಂದ ಒಂದೇ ಮಾರ್ಗಗಳಲ್ಲಿ ಸಂಚರಿಸುವ ಅನುಸೂಚಿಗಳಗೆ ಭಿನ್ನ ರೀತಿಯಲಗಲಿ ಷ್ಯೇಡ್ಯೂಲ್ ಓಟಿ (ಎಸ್.ಓಟಿ) ಗಂಟೆಗಳನ್ನು ನೀಡಲಾಗುತ್ತಿದೆ ಹಾಗೂ ರಾತ್ರಿ ಸೇವೆಯ ಅನುಸೂಚಿಗಳಗೆ ಕೆಲವು ವಿಭಾಗಗಳಲ್ಲಿ ಓಟಿ ನೀಡುತ್ತಿದ್ದು, ಕೆಲವು ವಿಭಾಗಗಳಲ್ಲಿ ಸಂಪೂರ್ಣವಾಗಿ ಓಟಿ ಕಡಿತಗೊಳಿಸಲಾಗಿದೆ. ಈ ಮೂಲಕ ಓಟಿ ನೀಡುವುದರಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಆದ್ದರಿಂದ ಒಂದೇ ಮಾರ್ಗದಲ್ಲಿ ಸಂಚರಿಸುವ ವಿವಿಧ ವಿಭಾಗಗಳ ಅನುಸೂಚಿಗಳಿಗೆ ಏಕರೂಪ ಓಟಿ ಗಂಟೆಗಳನ್ನು ನಿಗದಿಪಡಿಸುವುದು ಹಾಗೂ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು.

8) ರಾಜ್ಯಾದ್ಯಂತ ಮತ್ತು ರಾಜ್ಯದಿಂದ ಹೊರಗೆ ತಂಗುವ ಸಿಬ್ಬಂದಿಗಳಿಗೆ ವಿಶ್ರಾಂತಿ ಗೃಹಗಳನ್ನು ಸ್ಥಳೀಯ ಆಡಳತದಿಂದ (ಪಂಚಾಯಿತಿ ಮತ್ತು ಇತರೇ) ವ್ಯವಸ್ಥೆಯನ್ನು ಮಾಡಿಸಿಕೊಡಲು ಆಡಳಿತ ಮಂಡಳಿಯು ಕ್ರಮಕೈಗೊಳ್ಳಬೇಕು.

9) 58 ವರ್ಷ ಪೂರ್ಣಗೊಳ್ಳುವ ನೌಕರರಿಗೆ ಪಿಂಚಣಿ ನೀಡುವ ಸಂಬಂಧ ಈ ಮೊದಲು ಸಂಸ್ಥೆಯ ವತಿಯಿಂದಲೇ ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಕಚೇರಿಗೆ ನೀಡಿ ಪಿಂಚಣಿ ಮಂಜೂರು ಮಾಡಿಸಲಾಗುತ್ತಿತ್ತು, ಆದರೆ, ಕೋಲಾರ ವಿಭಾಗ ಸೇರಿದಂತೆ ನಿಗಮದ ಕೆಲ ವಿಭಾಗಗಳಲ್ಲಿ ಲೆಕ್ಕಪತ್ರ ಶಾಖೆಯಿಂದ ದಾಖಲೆಗಳನ್ನು ನೇರವಾಗಿ ಸಂಬಂಧಪಟ್ಟ ನೌಕರನಿಗೆ ನೀಡಿ ಖಾಸಗಿ ಬ್ರೌಸಿಂಗ್‌ ಸೆಂಟರ್‌ಗಳಲ್ಲಿ ಮಾಡಿಸಿಕೊಳ್ಳುವಂತೆ ಸೂಚಿಸುತ್ತಿದ್ದು, ಇದರಿಂದ ನೌಕರರಿಗೆ ಸಾಕಷ್ಟು ಅನಾನುಕೂಲ ಆಗಿದೆ ಅಲ್ಲದೆ ‘ದುಬಾರಿ ಹಣವನ್ನು ನೀಡಿ ಪಿಂಚಣಿ ಪಡೆದುಕೊಳ್ಳುವ ಸ್ಥಿತಿಯುಂಟಾಗಿದೆ. ಆದ್ದರಿಂದ ಈ ಹಿಂದಿನಂತೆ ನಿಗಮವೇ ನೌಕಕರಿಗೆ ಪಿಂಚಣಿ ಒದಗಿಸುವ ವ್ಯವಸ್ಥೆಯನ್ನು ಮಾಡುವ ಬಗ್ಗೆ ಸೂಕ್ತ ಆದೇಶ ನೀಡಬೇಕು.

10) 58 ವರ್ಷ ಮುಕ್ತಾಯಗೊಂಡ ಕೂಡಲೇ ನೌಕರರಿಗೆ ಪಿಂಚಣಿ ದೊರೆಯುವಂತೆ ಮಾಡಬೇಕು.

11) ನೌಕರನ ಪಿಂಚಣಿ ವಂತಿಗೆಯು ತನ್ನ ಖಾತೆಗೆ ಜಮೆಯಾಗದೇ ಬೇರೆ ನೌಕರನ ಖಾತೆಗೆ ಜಮೆ ಆಗಿರುವುದರಿಂದ ಹಲವಾರು ಮಂದಿ ನಿವೃತ್ತರಿಗೆ ಹಲವು ವರ್ಷಗಳಿಂದ ಪಿಂಚಣಿ ದೊರಕಿಲ್ಲ. ಈ ಬಗ್ಗೆ ವಿಭಾಗಗಳಿಂದ ಸಮರ್ಪಕ ಮಾಹಿತಿ ಪಡೆದು ಕೇಂದ್ರ ಕಚೇರಿ ಮಟ್ಟದಲ್ಲಿ ಪರಿಶೀಲಿಸಿ ಪಿಂಚಣಿ ದೊರೆಯುವಂತೆ ಮಾಡಬೇಕು.

12) ಸಂಸ್ಥೆಯ ಸೇವಾವಧಿಯಲ್ಲಿ ಮೃತಪಟ್ಟಿರುವ ಸಿಬ್ಬಂದಿಗಳ ಪತಿ/ಪತ್ನಿ ಅವರಿಗೂ ಸಹ ನಿವೃತ್ತ ನೌಕರರಿಗೆ ನೀಡುತ್ತಿರುವಂತೆ ವಾರ್ಷಿಕ ಉಚಿತ ಬಸ್‌ಪಾಸ್‌ ನೀಡಬೇಕು.

13) ನಿಗಮದಲ್ಲಿ ಕಿರಿಯ ಸಹಾಯಕ ಕಂ.ಡಾಟಾ ಎಂಟ್ರಿ ಆಪರೇಟರ್ ಹುದ್ದೆಯಿಂದ ಪದೋನ್ನತಿ ನೀಡುವ ಪದ್ಧತಿಯು ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿಯಿದ್ದು, ಗೊಂದಲದಿಂದ ಕೂಡಿದೆ. ಈ ಸಂಬಂಧ ಚಾಲ್ತಿಯಲ್ಲಿರುವ ಸುತ್ತೋಲೆ ಸಂಖ್ಯೆ 1172 ಮತ್ತು ಮೆಮೊರಾಂಡಮ್‌ನಲ್ಲಿ ಇರುವ ನಿರ್ದೇಶನಗಳು ಒಂದಕ್ಕೊಂದು ತದ್ದಿರುದ್ಧವಾಗಿವೆ. ಆದ್ದರಿಂದ ಪದೋನ್ನತಿ ನೀಡುವ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನೊಳಗೊಂಡ ಹೊಸ ಸುತ್ತೋಲೆ ಹೊರಡಿಸಬೇಕು.

14) ನಿಗಮದಲ್ಲಿ ಪ್ರಸ್ತುತ ಹಳೆಯ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಪ್ರಯಾಣಿಕರ ಹಿತಾಸಕ್ತಿ ಮತ್ತು ಸಂಸ್ಥೆಯ ಆರ್ಥಿಕ ಹಿತದೃಷ್ಟಿಯಿಂದ ಅಗತ್ಯ ಬಿಡಿಭಾಗಗಳನ್ನು ಒದಗಿಸುವುದು ಹಾಗೂ ನಿಗಮದ ಹಲವು ವಿಭಾಗಗಳಲ್ಲಿ “ಬ್ರೇಕ್ ಸ್ಲ್ಯಾಕ್ ಅಡ್ಜಸ್ಟರ್ ಬಿಡಿಭಾಗಗಳ ಕೊರತೆ ಇರುವುದಾಗಿ ಚಾಲಕರು ದೂರು ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು.

15) ರಜೆ ನೀಡುವ ವ್ಯವಸ್ಥೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರಬೇಕು.

16) ಕೆಲ ಅಧಿಕಾರಿ – ತನಿಖಾ ಸಿಬ್ಬಂದಿಗಳು ಮಾರ್ಗ ತನಿಖೆ ಸಮಯದಲ್ಲಿ ಬಾಡಿ ಕ್ಯಾಮರಾ ಧರಿಸದೆ ಎಲ್ಲೆಂದರಲ್ಲಿ ವಾಹನಗಳನ್ನು ತನಿಖೆ ಮಾಡಿ ಸುಳ್ಳು ಪ್ರಕರಣ ದಾಖಲಿಸುತ್ತಿದ್ದು, ಇದರಿಂದ ಪ್ರಮಾಣಿಕ ನಿರ್ವಾಹಕರಿಗೆ ಶಿಕ್ಷೆಯಾಗುತ್ತಿದೆ. ಆದ್ದರಿಂದ ತನಿಖಾ ಸಮಯದಲ್ಲಿ ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಮತ್ತು ಸಮವಸ್ತ್ರ ಧರಿಸಿ ತನಿಖಾ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ನಿರ್ದೇಶನ ನೀಡಬೇಕು.

17) ನಾಲ್ಕು ನಿಗಮಗಳಲ್ಲಿ ನಿವೃತ್ತ ನೌಕರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ಪಾವತಿಸಲು ಕ್ರಮವಹಿಸಬೇಕು.

18. ಜೀವ ವಿಮೆ ಸೇರಿದಂತೆ ನೌಕರರಿಂದ ಕಡಿತಗೊಳಿಸುವ ವಂತಿಗೆ ಹಣವನ್ನು ಸಂಬಂಧಪಟ್ಟ ಕಚೇರಿಗಳಿಗೆ ಆಯಾ ತಿಂಗಳಲ್ಲೇ ಪಾವತಿಸಬೇಕು.

19. ಸಮವಸ್ತ್ರದ ಬದಲಿಗೆ ನೀಡುತ್ತಿರುವ ಮೊತ್ತವು ತೀರಾ ಕಡಿಮೆ ಇದ್ದು, ನಿಗಮದ ವತಿಯಿಂದಲೇ ಸಮವಸ್ತ್ರವನ್ನು ನೀಡುವುದು ಅಥವಾ ಉತ್ತಮವಾದ ಮೊತ್ತವನ್ನು ನೀಡಬೇಕು ಎಂಬುವುದು ಸೇರಿದಂತೆ ಈ ಎಲ್ಲ 19 ಬೇಡಿಕೆಗಳು ಮತ್ತು ಕುಂದುಕೊರತೆಗಳನ್ನು ಸಭೆಯಲ್ಲಿ ಮಂಡಿಸಿದ್ದು ನೌಕರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ತುರ್ತಾಗಿ ಈಡೇರಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ರಾಮಕೃಷ್ಣ ಪೂಂಜಾ, ಉಪಾಧ್ಯಕ್ಷ ಮಂಜುನಾಥ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಮಹದೇವಯ್ಯ, ಕಾರ್ಯದರ್ಶಿ ಸುರೇಶ್ ಕುಮಾರ್, ಕಾರ್ಯಸಮಿತಿ ಸದಸ್ಯರಾದ ಮುನಿಸ್ವಾಮಿ, ಚಿಕ್ಕತಿಮ್ಮಯ್ಯ, ಗೋವಿಂದ ಇತರರ ಭಾಗವಹಿಸಿದ್ದರು.

Leave a Reply

error: Content is protected !!
LATEST
BMTC ದಕ್ಷಿಣ ವಿಭಾಗದ 7 ಘಟಕಗಳಲ್ಲೂ ಚಾಲನಾ ಸಿಬ್ಬಂದಿಯೇ ಕಸಗುಡಿಸಬೇಕು- ಕಂಡು ಕಾಣದಂತೆ ವರ್ತಿಸುವ ಡಿಸಿ ಆಶಾಲತಾ ಮೇಡಂ! KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ ಸಿಎಂ ಸ್ವಕ್ಷೇತ್ರ ರಂಗಸಮುದ್ರ ಸ್ಮಶಾನ ಭೂಮಿ ಮೇಲು ಬಿದ್ದ ವಕ್ಫ್‌ ಕಣ್ಣು- ಪಹಣಿಯಲ್ಲಿ 2021-22ರಿಂದ ವಕ್ಫ್‌ ಬೋರ್ಡ್ ಹ... BMTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ-ಎಲ್ಲರನ್ನೂ ಅಭಿನಂದಿಸಿದ ಸಾರಿಗೆ ಸಚಿವರು, ಅಧಿಕಾರಿಗಳು KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ