ಹಾಸನ: ನನ್ನೆಲ್ಲಾ ಸಾರಿಗೆ ಸಂಸ್ಥೆ ನಾಲ್ಕು ನಿಗಮದ ನೌಕರರಲ್ಲಿ ಒಂದು ಮನವಿ. ನಮ್ಮ ಕಾರ್ಮಿಕರಿಗೆ ಆದಂತಹ ಅನ್ಯಾಯವು ಯಾವ ನಿಗಮದ ಮಂಡಳಿಗಳಾಗಲಿ ಯಾವುದೇ ಸಂಘ ಸಂಸ್ಥೆಯ ಕಾರ್ಮಿಕರಾಗಲಿ ನಮಗೆ ಆದಂತಹ ಕಷ್ಟ ಮತ್ತು ಅವಮಾನಗಳು ಆರೋಪಗಳು ಯಾವ ಕಾರ್ಮಿಕರಿಗೂ ಆಗಬಾರದು.
ಸಾರಿಗೆ ಸಂಸ್ಥೆಯ ಎಲ್ಲ ಸಂಘಟನೆಗಳ ಪದಾಧಿಕಾರಿಗಳಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ, 6ನೇ ವೇತನ ಆಯೋಗವಾಗಲಿ, ಸರ್ಕಾರಿ ನೌಕರರಾಗಲಿ, ಸರ್ಕಾರಿ ನೌಕರರ ಸರಿ ಸಮಾನ ವೇತನ ವಾಗಲಿ, ಅಗ್ರಿಮೆಂಟ್ ಆಗಲಿ, ಪರ್ಸೆಂಟೇಜ್ ಇವೆಲ್ಲವನ್ನು ಬಿಟ್ಟು ನಮ್ಮ ಸಾರಿಗೆ ಸಂಸ್ಥೆಯ ಕಾರ್ಮಿಕರು ಮುಷ್ಕರದ ಸಮಯದಲ್ಲಿ ಆದಂತಹ ಪೊಲೀಸ್ ಕೇಸುಗಳು, ವಜಾ, ವರ್ಗಾವಣೆ ಇಂತಹ ಪ್ರಕರಣಗಳನ್ನು ಮೊದಲು ಬಗೆಹರಿಸಿ.
ಸರಿಸುಮಾರು ಸಾರಿಗೆ ಮುಷ್ಕರದ ಸಮಯದಿಂದ ಇಲ್ಲಿಯವರೆಗೆ 17 ತಿಂಗಳು ವಜಾ ಆದಂತಹ ಸಾರಿಗೆ ಕಾರ್ಮಿಕರಿಗೆ ವೇತನವಿಲ್ಲ, ಅವನ ಹೆಂಡತಿ ಮಕ್ಕಳಿಗೆ ತಿನ್ನಲು ಅನ್ನವಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರವೇಶ ಶುಲ್ಕ ಕಟ್ಟಲೂ ಹಣವಿಲ್ಲ.
ಜನ್ಮ ಕೊಟ್ಟ ತಂದೆ ತಾಯಿಯರ ಅನಾರೋಗ್ಯಕ್ಕೆ ಔಷಧ ಕೊಡಿಸಲು ಹಣವಿಲ್ಲ. ಇಂತಹ ವಿಚಾರಗಳ ಬಗ್ಗೆ ಗಮನಹರಿಸಿ ಆ ಮನನೊಂದ ಕಾರ್ಮಿಕರು ಅವರಿಗಾಗಿ ಮುಷ್ಕರ ಮಾಡಲಿಲ್ಲ, ನಾವೆಲ್ಲ ಒಂದೇ ತಾಯಿಯ ಮಕ್ಕಳೆಂದು ಸಾರಿಗೆ ಸಂಸ್ಥೆಯ ಪರವಾಗಿ ಮುಷ್ಕರ ಮಾಡಿದರು. ಇಂತಹ ಕಾರ್ಮಿಕರಿಗೆ ಯಾರೂ ಕೂಡ ಮೋಸ ಮಾಡಬೇಡಿ ಸಾರಿಗೆ ಸಂಸ್ಥೆಯಲ್ಲಿ ಬೆಳೆಸಿ ಮತ್ತು ಉಳಿಸಿ.
l ಪ್ರದೀಪ್ ಕುಮಾರ್, ಹಾಸನ