CRIMEನಮ್ಮಜಿಲ್ಲೆ

ಪ್ರೇಯಸಿ- ಆಕೆಯ 11 ವರ್ಷದ ಮಗನ ಕೊಂದಿದ್ದಾತನಿಗೆ ಜೀವಾವಧಿ ಶಿಕ್ಷೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪತಿಯಿಂದ ದೂರಾಗಿ ಇಬ್ಬರು ಮಕ್ಕಳ ಜತೆ ವಾಸಗಿದ್ದ ಮಹಿಳೆಯೊಂದಿಗೆ ಸಲುಗೆ ಬೆಳಸಿಕೊಂಎಉ ಬಳಿಕ ಆ ಪ್ರೇಯಸಿ ಮತ್ತು ಆಕೆಯ ಪುತ್ರನನ್ನು ಹತ್ಯೆ ಮಾಡಿದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪಿ ನೀಡಿದೆ.

ನಗರದ ಟಿ.ದಾರಸರಹಳ್ಳಿ ಬಳಿ 2023ರ ಸೆಪ್ಟೆಂಬರ್‌ನಲ್ಲಿ ಅಮ್ಮ ಮತ್ತು 11 ವರ್ಷದ ಮಗನ ಜೋಡಿ ಕೊಲೆ ಆರೋಪಿ ಶೇಖಪ್ಪ ಎಂಬಾತನೆ ಶಿಕ್ಷೆಗೆ ಒಳಗಾದ ಅಪರಾಧಿ. ಈ ಜೋಡಿ ಕೊಲೆ ಆರೋಪಿ ಶೇಖಪ್ಪನಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಸಿಸಿಎಚ್ – 51ರ ನ್ಯಾಯಧೀಶರಾದ ಸಂತೋಷ್ ಆದೇಶ ಹೊರಡಿಸಿದ್ದಾರೆ.

ಟಿ.ದಾರಸರಹಳ್ಳಿಯ ನಿವಾಸಿ ನವನೀತ ಹಾಗೂ ಆಕೆಯ ಹನ್ನೊಂದು ವರ್ಷದ ಮಗ ಸಾಯಿ ಸೃಜನ್ ಎಂಬಾತನನ್ನ ಆರೋಪಿ ಶೇಖಪ್ಪ ಕೊಲೆ ಮಾಡಿದ್ದ. ಈ ಸಂಬಂಧ ಬಾಗಲಗುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ಇನ್ನು ನವನೀತ ಗಂಡನಿಂದ ಬೇರ್ಪಟ್ಟು ಇಬ್ಬರ ಮಕ್ಕಳ ಜತೆ ವಾಸವಾಗಿದ್ದರು. ಇದೇ ವೇಳೆ, ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಆರೋಪಿ ಶೇಖಪ್ಪನ ಪರಿಚಯವಾಗಿ ಆತ್ಮೀಯತೆ, ಸಲುಗೆ ಬೆಳೆದಿತ್ತು. ಇದರ ನಡುವೆಯೇ ಮತ್ತೊಬ್ಬ ವ್ಯಕ್ತಿ ಜೊತೆ ಮಹಿಳೆ ಓಡಾಡುತ್ತಿದ್ದಳು. ಅದಕ್ಕೆ ಕೋಪಗೊಂಡು ಗಲಾಟೆ ತೆಗೆದು ಮನೆಯಲ್ಲೇ ಚಾಕುವಿನಿಂದ ಚುಚ್ಚಿ ಆರೋಪಿ ಕೊಲೆ ಮಾಡಿದ್ದ.

ತಾಯಿಯನ್ನು ಹತ್ಯೆ ಮಾಡುತ್ತಿರುವುದನ್ನು ನೋಡಿದ್ದ ಆಕೆಯ ಮಗನನ್ನು ಈ ಕಿಡಿಗೇಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಸದ್ಯ ನ್ಯಾಯಾಲಯ ಈಗ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

Deva
the authorDeva

Leave a Reply

error: Content is protected !!
Latest news
KSRTC ಮೈಸೂರು ಡಿಸಿಗೆ- RC, FC ಚಾಲಕ ನಿರ್ವಾಹಕರ ಜವಾಬ್ದಾರಿನಾ?: ಹೇ ತಲೆಕೆಟ್ಟ ಡಿಸಿ ನೀನು ನಿಜವಾಗಲು ಜವಾಬ್ದಾರಿಯಿಂ... ಭಾರೀ ಮಳೆಗೆ ನೆಲಕಚ್ಚಿದ ಪರಂಗಿ ಅಡಿಕೆ ಗಿಡಗಳು -ಅಪಾರ ಪ್ರಮಾಣದ ಬೆಳೆ ಹಾನಿ ರೈತರ ಗೋಳಾಟ ಪ್ರೀತಿ ನಿರಾಕರಿಸಿದ್ದಕ್ಕೆ ಹೈಟೆನ್ಷನ್ ಕಂಬ ಹತ್ತಿ ಕುಳಿತಿರುವ ಪಾಗಲ್‌ ನಾಳೆಯಿಂದ ಹಮ್ಮಿಕೊಂಡಿದ್ದ ಅರ್ನಿದಿಷ್ಟವಾಧಿ ಸಾರಿಗೆ ನೌಕರರ ಮುಷ್ಕರ ವಾಪಸ್‌: ಜಂಟಿ ಕ್ರಿಯಾ ಸಮಿತಿ ಜಂಟಿ ಕ್ರಿಯಾ ಸಮಿತಿಗೆ ಶಾಕ್‌: KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹೈ ಕೋರ್ಟ್‌ ತಡೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ ಮತ್ತೊಂದು KSRTC ನೌಕರರ ಸಂಘ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಸಾವು ಇಂದು ರಾತ್ರಿ 8.30ರಿಂದ 9.30ರವರೆಗೆ KSRTC ಎಂಡಿ ಅಕ್ರಮ್‌ ಪಾಷರ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಮುಖಂಡರು! ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ KSRTC ಪ.ಜಾ.-ಪ.ಪಂ ನೌಕರರ ಸಂಘ ಗುಡುಗು ಸಿಡಿಲಿನ ಆರ್ಭಟ: ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ