NEWSನಮ್ಮಜಿಲ್ಲೆಸಂಸ್ಕೃತಿ

ಪವಾಡ ಪುರುಷ ಶ್ರೀ ಸಿದ್ದಪ್ಪಾಜಿ ನೆಲೆಯಲ್ಲಿ ಅದ್ದೂರಿ ಚಂದ್ರ ಮಂಡಲೋತ್ಸವ

ವಿಜಯಪಥ ಸಮಗ್ರ ಸುದ್ದಿ

ಕೊಳ್ಳೇಗಾಲ: ಪವಾಡ ಪುರುಷ ಶ್ರೀ ಸಿದ್ದಪ್ಪಾಜಿ ನೆಲೆಯಲ್ಲಿ ಅದ್ದೂರಿ ಚಂದ್ರಮಂಡಲೋತ್ಸವ ಶುಕ್ರವಾರ ಆರಂಭವಾಯಿತು. ಕೊಳ್ಳೇಗಾಲ ತಾಲೂಕಿನ ಹನೂರು ವಿಧಾನಸಭಾ ಕ್ಷೇತ್ರದ ಚಿಕ್ಕಲ್ಲೂರು ಜಾತ್ರೆಗೆ ವರ್ಷದ ಮೊದಲ ಹುಣ್ಣಿಮೆ ದಿನ ಅದ್ದೂರಿ ಚಾಲನೆ ದೊರೆಯಿತು.

ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ರಾತ್ರಿ ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿದ್ದು, ಅಗ್ನಿ ಜ್ವಾಲೆ ದಕ್ಷಿಣ ಮುಖವಾಗಿ ಉರಿದಿದ್ದು ಈ ಬಾರಿ ದಕ್ಷಿಣ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗಲಿದೆ ಎಂದು ಭಕ್ತರು ಹೇಳುತ್ತಿದ್ದಾರೆ.

ಐದು ದಿನಗಳ ಕಾಲ ನಡೆಯುವ ತಾಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ ಶುಕ್ರವಾರದಿಂದ ಆರಂಭವಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಸಿದ್ದಪ್ಪಾಜಿಯ ಭಕ್ತರು ಚಿಕ್ಕಲ್ಲೂರು ಕಡೆಗೆ ಧಾವಿಸಿದ್ದಾರೆ.

ಶುಕ್ರವಾರ ರಾತ್ರಿ 9 ಗಂಟೆಗೆ ಚಂದ್ರಮಂಡಲದ ಮೂಲಕ ಜಾತ್ರೆ ಆರಂಭಗೊಂಡಿರುವುದು ವಿಶೇಷ. ಸಿದ್ದಪ್ಪಾಜಿ ಒಕ್ಕಲಿನ ಏಳು ಗ್ರಾಮಗಳಾದ ಸುಂಡ್ರಳ್ಳಿ, ಬಾಣೂರು, ತೆಳ್ಳನೂರು, ಕೊತ್ತನೂರು, ಬಾಳಗುಣಸೆ, ಇರಿದಾಳು ಇಕ್ಕಡಹಳ್ಳಿಯ ಗ್ರಾಮಸ್ಥರು ಸುಗ್ಗಿಯ ನಂತರ ಹುಣ್ಣಿಮೆಯ ದಿನ ಕಿರಾಟಾಕಾರದ ಚಂದ್ರಮಂಡಲವನ್ನು ಬಿದಿರಿನಿಂದ ಕಟ್ಟಿ ಭಕ್ತರು ತರುವ ಎಣ್ಣೆ ಬತ್ತಿಯನ್ನು ಇದಕ್ಕೆ ಸುತ್ತಿ ಬೊಪ್ಪೇಗೌಡನ ಪುರದ ಮಠದ ಶ್ರೀಗಳು ಅಗ್ನಿ ಪ್ರವೇಶ ಮಾಡುವ ಸಂದರ್ಭಕ್ಕೆ ಲಕ್ಷಾಂತರ ಭಕ್ತರು ಕಾತುರುದಿಂದ ಕಾಯುತ್ತಾರೆ.

ಅಗ್ನಿಸ್ಪರ್ಶವಾಗುತ್ತಿದ್ದಂತೆ ಉಘೇ ಉಘೇ ಸಿದ್ದಪ್ಪಾಜಿ ಎಂದು ಘೋಷಣೆ ಕೂಗುತ್ತ ಧವಸ ಧಾನ್ಯವನ್ನು ಚಂದ್ರಮಂಡಲಕ್ಕೆ ಎರಚಿ ಭಕ್ತಿ ಸಮರ್ಪಣೆ ಮಾಡುತ್ತಾರೆ. ಚಂದ್ರ ಮಂಡಲದ ಜ್ವಾಲೆ ಯಾವ ದಿಕ್ಕಿಗೆ ಪಸರಿಸುವುದು ಆ ದಿಕ್ಕೆಗೆ ಮುಂದಿನ ವರ್ಷ ಮಳೆ ಬೆಳೆ ಸಮೃದ್ಧಿ ಎಂಬ ನಂಬಿಕೆ ಇದೆ.

ಸ್ವಾಮಿಗಳಿಗೆ ಸ್ವಾಗತ: ಬೊಪ್ಪೆಗೌಡನ ಪುರದಿಂದ ಚಂದ್ರಮಂಡಲಕ್ಕೆ ಆಗಮಿಸಿದ ಜ್ಞಾನಾನಂದ ಚೆನ್ನರಾಜೇ ಅರಸ್ ಅವರನ್ನು ಮಾರ್ಗದುದ್ದಕ್ಕೂ ನೀಲಗಾರರು ಹಾಗೂ ಸಿದ್ದಪ್ಪಾಜಿ ಭಕ್ತವೃಂದ ತಳಿರು ತೋಳರಣಗಳಿಂದ ಶೃಂಗರಿಸಿ ಮಠಪದಲ್ಲಿ ಕುಳ್ಳಿರಿಸಿ ಜಾತ್ರೆಗೆ ಬರಮಾಡಿಕೊಂಡರು. ಜಾತ್ರೆ ಪ್ರವೇಶಿಸುತ್ತಿದ್ದಂತೆ ಕಂಡಾಯಗಳು ಹಾಗೂ ಸಕಲ ಬಿರಿದು ಬಾವುಲಿಗಳೊಡನೆ ಮಂಗಳ ವಾದ್ಯ ಸಮೇತ ಮಠಕ್ಕೆ ಕರೆದೊಯ್ಯಲಾಯಿತು.

[wp-rss-aggregator limit=”4″ pagination=”on”]

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ