CrimeNEWSದೇಶ-ವಿದೇಶ

ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ನಿಗೂಢ ಸಾವು ಪ್ರಕರಣ: ಪೊಲೀಸರಿಗೆ 20 ಲಕ್ಷ ರೂ. ದಂಡ- ಸಿಬಿಐಗೆ ಕೇಸ್‌ ವರ್ಗಾವಣೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಭೋಪಾಲ್‌ : ದಾಬ್ರಾ ಪಟ್ಟಣದಲ್ಲಿ ಮೂರು ವರ್ಷಗಳ ಹಿಂದೆ ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿಯೊಬ್ಬ ನಿಗೂಢವಾಗಿ ಮೃತಪಟ್ಟ ಪ್ರಕರಣ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಐವರು ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ಗೃಹ ರಕ್ಷಕ ಯೋಧನಿಗೆ 20 ಲಕ್ಷ ರೂ. ದಂಡ ವಿಧಿಸಿದೆ.

ಇನ್ನು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನ್ಯಾಯಮೂರ್ತಿ ಜಿ.ಎಸ್.ಅಹ್ಲುವಾಲಿಯಾ ಅವರಿದ್ದ ಏಕ ಸದಸ್ಯೆ ಪೀಠವೂ ಆದೇಶಿಸಿದೆ.

ಮಧ್ಯಪ್ರದೇಶದ ಬೆಳಗಾದ ಗ್ರಾಮದ ನಿವಾಸಿ ಸುರೇಶ್ ರಾವತ್ ಎಂಬುವವರನ್ನು ಗ್ವಾಲಿಯರ್‌ನ ಸ್ಥಳೀಯ ಪೊಲೀಸರು ಆಗಸ್ಟ್ 10, 2019 ರಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಿದ್ದಾರೆ.

ಬಂಧನದ ಕೆಲವು ಗಂಟೆಗಳ ನಂತರ, ಸುರೇಶ್ ರಾವತ್ ಬೆಳಗಾದ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ಲಭ್ಯವಿಲ್ಲದಿದ್ದಾಗ ಮತ್ತು ವಿದ್ಯುತ್ ಕಡಿತದ ಸಮಯದಲ್ಲಿ ಸುರೇಶ್ ರಾವತ್ 10 ನಿಮಿಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು.

ಆದರೆ, ಪೊಲೀಸರು ಆತನಿಗೆ ಥಳಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಐವರು ಪೊಲೀಸ್ ಸಿಬ್ಬಂದಿ ಮೇಲೆ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಮೃತರ ಮಗ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇನ್ನು ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಧೀಶ ಅಹ್ಲುವಾಲಿಯಾ ಅವರಿದ್ದ ಏಕ ಸದಸ್ಯ ಪೀಠ ಪ್ರಕರಣದ ಸಂಪೂರ್ಣ ಸತ್ಯ ಮತ್ತು ಸಂದರ್ಭಗಳನ್ನು ಪರಿಗಣಿಸಿ, ಈ ನ್ಯಾಯಾಲಯವು ನಿರ್ದಿಷ್ಟ ಅಭಿಪ್ರಾಯವನ್ನು ಹೊಂದಿದೆ. ಜಿಲ್ಲಾ ಪೊಲೀಸ್ ಗ್ವಾಲಿಯರ್ ಮತ್ತು ತನಿಖಾಧಿಕಾರಿಗಳು ಈ ನ್ಯಾಯಾಲಯದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಅವರು ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯನ್ನು ರಕ್ಷಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ.

ಹೀಗಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬೆಳಕಿನಲ್ಲಿ, ಗ್ವಾಲಿಯರ್ ಪೊಲೀಸರು ಮುಕ್ತ ಮತ್ತು ನ್ಯಾಯಯುತ ತನಿಖೆಯನ್ನು ನಡೆಸುವಲ್ಲಿ ದಯನೀಯವಾಗಿ ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅದರಂತೆ ಐಪಿಸಿ ಸೆಕ್ಷನ್ 302,306,342,34 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಅಪರಾಧಕ್ಕಾಗಿ ಬೆಳಗಾದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಈ ಮೂಲಕ ಸಿಬಿಐಗೆ ವರ್ಗಾಯಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ (ಐದು) ಪೊಲೀಸರನ್ನು ಅಮಾನತುಗೊಳಿಸಬೇಕು ಮತ್ತು ಅವರನ್ನು ಪ್ರಧಾನ ಕಚೇರಿ ಗ್ವಾಲಿಯರ್‌ನಿಂದ 700 ಕಿಮೀ ದೂರದಲ್ಲಿ ಇರಿಸಬೇಕು. ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರನ್ನು ಅಮಾನತುಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Leave a Reply

error: Content is protected !!
LATEST
BMTC ದಕ್ಷಿಣ ವಿಭಾಗದ 7 ಘಟಕಗಳಲ್ಲೂ ಚಾಲನಾ ಸಿಬ್ಬಂದಿಯೇ ಕಸಗುಡಿಸಬೇಕು- ಕಂಡು ಕಾಣದಂತೆ ವರ್ತಿಸುವ ಡಿಸಿ ಆಶಾಲತಾ ಮೇಡಂ! KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ ಸಿಎಂ ಸ್ವಕ್ಷೇತ್ರ ರಂಗಸಮುದ್ರ ಸ್ಮಶಾನ ಭೂಮಿ ಮೇಲು ಬಿದ್ದ ವಕ್ಫ್‌ ಕಣ್ಣು- ಪಹಣಿಯಲ್ಲಿ 2021-22ರಿಂದ ವಕ್ಫ್‌ ಬೋರ್ಡ್ ಹ... BMTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ-ಎಲ್ಲರನ್ನೂ ಅಭಿನಂದಿಸಿದ ಸಾರಿಗೆ ಸಚಿವರು, ಅಧಿಕಾರಿಗಳು KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ