NEWSನಮ್ಮಜಿಲ್ಲೆನಮ್ಮರಾಜ್ಯ

ಮೈಸೂರು: ಬೆಳಗಾವಿಯ ಅಧಿವೇಶನದಲ್ಲಿ ಸಾರಿಗೆ ನೌಕರರ ಪರ ಧ್ವನಿಎತ್ತಿ: ಜೆಡಿಎಸ್‌ ಶಾಸಕ ಜಿಟಿಡಿಗೆ ಕೂಟದ ಪದಾಧಿಕಾರಿಗಳ ಮನವಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಇದೇ ಡಿಸೆಂಬರ್‌ 19ರಿಂದ ಬೆಳಗಾವಿಯಲ್ಲಿ ಆರಂಭವಾಗುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಾರಿಗೆ ನೌಕರರ ಸಮಸ್ಯೆ ಮತ್ತು ಸರಿ ಸಮಾನ ವೇತನ ಸಂಬಂಧ ತಾವು ಮಾತನಾಡಬೇಕು ಎಂದು ಜೆಡಿಎಸ್‌ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರಲ್ಲಿ ಸಾರಿಗೆ ನೌಕರರ ಕೂಟದ ಮೈಸೂರು ವಿಭಾಗದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಭಾನುವಾರ ಶಾಸಕರ ಮನೆಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಕಳೆದ ಮೂರು ವರ್ಷದಿಂದ ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ ಮತ್ತು ಆಡಳಿತ ಮಂಡಳಿಗಳಿಗೆ ನೂರಾರು ಮನವಿ ಪತ್ರಗಳನ್ನು ಸಲ್ಲಿಸಿದ್ದೇವೆ. ಆದರೂ ನಮ್ಮ ಬೇಡಿಕೆಗಳನ್ನು ಈವರೆಗೂ ಈಡೇರಿಸಿಲ್ಲ. ಆದ ಕಾರಣ ತಾವು ಚಳಿಗಾಲದ ಅಧಿವೇಶನದಲ್ಲಿ ನಮ್ಮ ಪರವಾಗಿ ಧ್ವನಿಯೆತ್ತಬೇಕು ಎಂದು ಮನವಿ ಮಾಡಿದರು.

ಇನ್ನು ನಾವು ಅವರ ಮನೆಗೆ ಹೋಗುತ್ತಿದ್ದಂತೆ ನಮ್ಮನ್ನು ಅತಿ ಸೌಜನ್ಯದಿಂದ ಬರಮಾಡಿಕೊಂಡು ನಿಮ್ಮ ಸಮಸ್ಯೆಗಳನ್ನು ನಾನು ಅರಿತಿದ್ದೇನೆ ಈಗಾಗಲೇ ಅಂದರೆ ಮೊಟ್ಟಮೊದಲ ಬಾರಿಗೆ ವಿಧಾನಸೌಧದಲ್ಲಿ ನಿಮ್ಮ ಪರವಾಗಿ ಮಾತನಾಡಿದ್ದೇನೆ. ಮತ್ತೊಮ್ಮೆ ನಿಮ್ಮ ಪರವಾಗಿ ಧ್ವನಿಗೂಡಿಸಿ ಸರ್ಕಾರದ ಗಮನ ಸೆಳೆದು ನಿಮ್ಮ ಸಾತ್ವಿಕ ಬೇಡಿಕೆಗಳು ಆದಷ್ಟು ಬೇಗ ಈಡೇರಿಸಲು ಪ್ರಯತ್ನಪಡುತ್ತೇನೆ ಎಂದು ಭರಸೆ ನೀಡಿದ್ದಾರೆ.

ನಿಮ್ಮ ಕಷ್ಟಗಳನ್ನು ನಾನು ಅರಿತವನಾಗಿ ನಿಮ್ಮ ಪರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಬೇಡಿಕೆ ಈಡೇರಿ ನಿಮ್ಮ ಬದುಕು ಹಸನಾಗಲಿ ಎಂಬುವುದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.

ಎಲ್ಲರ ಸಮಸ್ಯೆಗಳನ್ನು ಅತೀ ಜರೂರಾಗಿ ಗಮನಿಸುವ ಸರ್ಕಾರ ಸಾರಿಗೆ ನೌಕರರು ಮತ್ತು ಅನ್ನದಾತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಮಾತ್ರ ಹಿಂದೆ ಸರಿಯುತ್ತದೆ. ಇದರ ಅರ್ಥ ಏನು ಎಂದು ಈಗ ಜನಸಾಮಾನ್ಯ ಕೇಳುತ್ತಿದ್ದಾನೆ. ಆದರೆ ಸರ್ಕಾರದ ಅಸಡ್ಡೆ ಮನೋಭಾವನೆಯಿಂದ ಇನ್ನು ಉತ್ತರ ಸಿಕ್ಕಿಲ್ಲ.

ಅದೇನೇ ಇರಲಿ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಾದರೂ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತಹ ನಿರ್ಧಾರವನ್ನು ಸರ್ಕಾರ ಮಾಡಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಕಲಿಯಲಿದೆ.

ಶಾಸಕರ ಭೇಟಿವೇಳೆ ಕೂಟದ ಪದಾಧಿಕಾರಿಗಳಾದ ಸಿ.ಡಿ. ವಿಶ್ವನಾಥ್, ಕೆ.ಪಿ. ರಾಘವೇಂದ್ರ, ರವಿ, ಮಂಜೇಗೌಡ, ದೀಪು, ರಾಮೇಗೌಡ, ಇನ್ನು ಹಲವರು ಇದ್ದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ