ಶಿವಮೊಗ್ಗ: ಅನಾರೋಗ್ಯದಿಂದ ಮೃತಪಟ್ಟಿದ್ದ ನಿವೃತ್ತ ಶಿಕ್ಷಕಿಯ ಶವದ ಜತೆ ಮಾನಸಿಕ ಅಸ್ವಸ್ಥೆ ಮಗಳು ಒಂದು ವಾರ ಕಳೆದಿರುವ ಹೃದಯ ವಿದ್ರಾವಕ ಘಟನೆ ಇಂದು ತಿಳಿದು ಬಂದಿದೆ.
ನಿವೃತ್ತ ಶಿಕ್ಷಕಿ ರಾಜೇಶ್ವರಿ (65) ಮೃತರು. ನಗರದ ಬಸವೇಶ್ವರ ಜನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಶಿಕ್ಷಕಿ ರಾಜೇಶ್ವರಿ ಅವರು ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದರಿಂದಲೇ ಕಳೆದ ವಾರ ಮೃತಪಟ್ಟಿರಬಹುದು. ಆದರೂ ಮನೆಯಲ್ಲಿದ್ದ ಮಗಳು ಅಮ್ಮ ಮಲಗಿದ್ದಾಲೆ ಎಂದು ಅಡುಗೆಯನ್ನು ಮಾಡಿಕೊಂಡು ಊಟ ಮಾಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇವರು ಅಕ್ಕಪಕ್ಕದ ಮನೆಯವರೊಂದಿಗೆ ಹೆಚ್ಚಾಗಿ ಸಂಪರ್ಕ ಹೊಂದಿರಲಿಲ್ಲ. ಕಾರಣ ಮಗಳು ಮಾನಸಿಕ ಅಸ್ವವಸ್ಥೆ ಎಂಬುವುದು. ಇದರಿಂದಲೇ ಅಕ್ಕಪಕ್ಕದ ಮನೆಯವರು. ಇವರ ಬಗ್ಗೆ ಅಷ್ಟಾಗಿ ಗಮನಿಸುತ್ತಿರಲಿಲ್ಲ. ಆದರೆ ಒಂದು ವಾರದ ಹಿಂದೆಯೇ ಶಿಕ್ಷಕಿ ನಿಧನರಾಗಿದ್ದರಿಂದ ಮನೆಯಿಂದ ಕೆಟ್ಟವಾಸನೆ ಬರುತ್ತಿದ್ದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಜನಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪೊಲೀಸರು, ಮನೆಯ ಒಳಗಡೆಯಿಂದ ಚಿಲಕ ಹಾಕಿಕೊಂಡಿದ್ದ ಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದಾರೆ. ಆ ವೇಳೆ ತಾಯಿ ನಿಧನರಾಗಿದ್ದು, ಮಗಳು ಆ ವಾಸನೆಯಲ್ಲೇ ಇದ್ದನ್ನು ನೋಡಿದ್ದಾರೆ. ಬಳಿಕ ಆಕೆಯನ್ನು ವಿಚಾರಿಸಿದಾಗ ಅಮ್ಮ ಮಲಗಿದ್ದಾರೆ ಎಂದು ಹೇಳಿದ್ದಾರೆ. ಆಕೆಯ ಮಾತನ್ನು ಗಮನಿಸಿದ ಪೊಲೀಸರು ಈಕೆ ಮಾನಸಿಕ ಅಸ್ವಸ್ಥೆ ಎಂಬುದನ್ನು ತಿಳಿದು ಈಗ ಶಿವಮೊಗ್ಗದ ಮಾನಸಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ಶಿಕ್ಷಕಿಯ ಸಂಬಂಧಿಕರು ಯಾರಿದ್ದಾರೆ ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ತನ್ನ ತಾಯಿ ಒಂದು ವಾರದ ಹಿಂದೆಯೇ ಸಾವನ್ನಪ್ಪಿದ್ದರು ಮಗಳು ಆ ಕೊಳೆತ ಹೆಣದ ಜತೆಯಲ್ಲೇ ಕಾಲಕಳೆದಿರುವುದು ನಿಜಕ್ಕೂ ಹೃದಯ ಕಲಕುವ ಘಟನೆ.ಯೇ. ಇಂಥವರನ್ನು ನೋಡಿಕೊಳ್ಳಲು ತುಂಬ ಹತ್ತಿರದ ಸಂಬಂಧಿಕರು ಇಲ್ಲವೇ ಎಂಬುವುದು ಪೊಲೀಸರನ್ನು ಸದ್ಯ ಕಾಡುತ್ತಿರುವ ಪ್ರಶ್ನೆಯಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail