ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಗುಂಡಿಯಿಂದ ಎಡವಿ ಮುಗ್ಗರಿಸಿ ಬಿದ್ದ ವೃದ್ಧೆ ಬಿಎಂಟಿಸಿ ಬಸ್‌ಗೆ ಸಿಲುಕಿ ಮೃತಪಟ್ಟಿರುವ ಘಟನೆ ನಗರದ ದೊಡ್ಡಕಲ್ಲಸಂದ್ರ ಬಳಿ ನಡೆದಿದೆ.
ಕಳೆದ ಒಂದು ತಿಂಗಳ ಹಿಂದೆ ಕನಕಪುರ ಮುಖ್ಯರಸ್ತೆಯಲ್ಲಿ ಅವಘಡ ಸಂಭವಿಸಿದ್ದು, ಆಕೆಯನ್ನು ತಕ್ಷಣ ಚಾಲಕ ಮತ್ತು ನಿರ್ವಾಹಕರು ಆಸ್ಪತ್ರೆಗೆ ದಾಖಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಅವರು ಕೊನೆಯುಸಿರೆಳೆದಿದ್ದಾರೆ.
ದೊಡ್ಡಕಲ್ಲಸಂದ್ರದ ಅಪಾರ್ಟ್ ಮೆಂಟ್‌ನಿಂದ ನಡೆದುಕೊಂಡು ವೃದ್ಧೆ ಅರಾಮವಾಗಿ ಬರುತ್ತಿದ್ದ ವೇಳೆ ಗುಂಡಿಗೆ ಕಾಲು ಸಿಲುಕಿದ್ದರಿಂದ ಮುಗ್ಗರಿಸಿ ಮುಗ್ಗರಿಸಿಕೊಂಡು ಹೋಗಿ ಚಲಿಸುತ್ತಿದ್ದ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಪ್ರಾಣಬಿಟ್ಟಿದ್ದಾರೆ.
ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಬಿಎಂಪಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ.
ಆದರೂ ಘಟನೆಗೆ ಕಾರಣವಾದ ಆ ಗುಡ್ಡಿಯನ್ನು ಬಿಬಿಎಂಪಿ ಅಧಿಕಾರಿಗಳು ಇನ್ನೂ ಮುಚ್ಚಿಲ್ಲ, ಇನ್ನು ಎಷ್ಟು ಪ್ರಾಣಗಳನ್ನು ಬಲಿ ತೆಗೆದುಕೊಳ್ಳುವವರೆಗೆ ಈ ಅಧಿಕಾರಿಗಳು ಕಾಯುತ್ತಿದ್ದಾರೋ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಗುಂಡಿಗಳಿಂದ ಈಗಾಗಲೇ ನೂರಾರಲ್ಲ ಸಾವಿರಾರು ಪ್ರಾಣಪಕ್ಷಗಳು ಹಾರಿ ಹೋಗಿವೆ. ಈ ಬಗ್ಗೆ ಹೈ ಕೋರ್ಟ್ ಕೂಡ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡು ಹಲವು ಬಾರಿ ಎಚ್ಚರಿಕೆ ನೀಡಿದರು ಬಿಬಿಎಂಪಿ ಮಾತ್ರ ಇನ್ನು ಎಚ್ಚತ್ತುಕೊಂಡಿಲ್ಲದಿರುವುದು ದುರಂತವೆ ಸರಿ.