ಕೋಲಾರ: ಕೆರೆಗಳು ಒತ್ತುವರಿಯಾಗಿವೆ ಅವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದು ರೈತ ಮಹಿಳೆ ಮನವಿ ಮಾಡುತ್ತಿದ್ದಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವಾಚ್ಯ ಶಬ್ದ ಬಳಕೆ ಮಾಡಿ ಆ ರೈ ಮಹಿಳೆಯನ್ನು ಪೊಲೀಸರಿಂದ ಹೊರ ದಬ್ಬಿಸಿದ್ದಾರೆ.
ಇಂದು ಕೋಲಾರಕ್ಕೆ ಭೇಟಿ ನೀಡಿದ ಸಚಿವರನ್ನು ರೈತ ಮಹಿಳೆ ಸೇರಿ ಹಲವು ರೈತರು ತಡೆದು ಎಸ್. ಅಗ್ರಹಾರ ಕೆರೆ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಿ ನೀರು ತುಂಬಲು ಅನುಕೂಲ ಮಾಡಿಕೊಟ್ಟರೆ ರೈತರ ಫಸಲಿಗೆ ನೀರು ಸಿಗಲಿದೆ ಎಂದು ಮನವಿ ಮಾಡಿದ್ದಾರೆ. ಜತೆಗೆ ಹಲವು ಬಾರಿ ಮನವಿ ಮಾಡಿದರು ಯಾವ ಸಚಿವರು ಸ್ಪಂದಿಸಿಲ್ಲ ಎಂದು ಹೇಳಿ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಹೇಳುತ್ತಿದ್ದಂತೆ ಸಚಿವರು ಗರಂ ಆಗಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಅಲ್ಲದೇ ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಮಹಿಳಾ ಪೇದೆ ಜತಗೂಡಿ ಆ ರೈತ ಮಹಿಳೆಯನ್ನು ಹೊರದಬ್ಬಿದ್ದಾರೆ. ಅಲ್ಲದೇ ಅಸಭ್ಯರಂತೆ ವರ್ತಿಸಿರುವುದು ಈಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನಾವು ನಮ್ಮ ಮನೆ ಕೆಲಸ ಮಾಡಿಕೊಡಿ ಎಂದು ಕೇಳುತ್ತಿಲ್ಲ. ಒತ್ತುವರಿಯಾಗಿರುವ ಕೆರೆಯನ್ನು ಒತ್ತುವರಿದಾರರಿಂದ ಮುಕ್ತಗೊಳಿಸಿಕೊಡಿ ಎಂದು ಕೇಳಿದ್ದಕ್ಕೆ ಯಾವಾಗಲು ನೀನು ತರ್ಲೆ ಮಾಡುತ್ತೀಯ ಎಂದು ಪೊಲೀಸಪ್ಪನ್ನು ನಿಂದಿಸಿದ ವಿಡಿಯೋ ಟಿವಿ ಮಾಧ್ಯವೊಂದರಲ್ಲಿ ಬಿತ್ತರವಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಅದನ್ನು ನೋಡಿದ ಮತ್ತು ಕೇಳಿದ ಹಲವು ರೈತ ಮುಖಂಡರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಜನರೊಂದಿಗೆ ಅದು ರೈತ ಮಹಿಯ ಜತೆ ನಡೆದುಕೊಂಡ ರೀತಿ . ಒಳ್ಳೆಯದನ್ನು ಮಾಡಬೇಕಾದವರು ಒತ್ತುವರಿದಾರರ ಪರ ನಿಂತಿರುವಂತೆ ಕಾಣುತ್ತಿದೆ ಎಂದು ಕಿಡಿ ಕಾರಿದ್ದಾರೆ. ಅಲ್ಲದೇ ಸಚಿವರ ವರ್ತನೆಯಿಂದ ರೈತರಿಗೆ ಅಪಮಾನವಾಗಿದೆ. ಆದ್ದರಿಂದ ಅವರು ರೈತ ಮಹಿಳೆಯಲ್ಲಿ ಕ್ಷೆಮೆ ಕೇಳಬೇಕು ಇಲ್ಲದಿದ್ದರೆ ಮುಂದಿನ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail