ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ನವಿಲೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶೋಭಾ ಅವರು ಇಂದು ಎಂದಿನಂತೆ ಶಾಲೆಗೆ ತೆರಳಲು ಸಬ್‌ಹರ್ಬನ್ ಬಸ್ ಸ್ಟ್ಯಾಂಡ್ ಗೆ ತೆರಳುವ ಸಂದರ್ಭದಲ್ಲಿ ನಗರದ ಪೀಪಲ್ಸ್ ಪಾರ್ಕ್ ಬಳಿ ಗರ್ಭಿಣಿ ಪ್ರಸವದ ನೋವು ತಡೆಯಲಾರದೆ ಚೀರಾಡುತ್ತಿದ್ದರು. ಅದನ್ನು ಕಂಡ ಶೋಭಾ ಅವರು ಸುಲಲಿತವಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ.
ಪ್ರಸವ ವೇದನೆ ತಾಳಲಾರದೆ ಚೀರಾಡುತ್ತಿದ್ದನ್ನು ಗಮನಿಸಿದ ಅಲ್ಲೆ ಸುತ್ತಮುತ್ತ ಇದ್ದ ಪುರುಷರು ಯಾರಾದರೂ ಈಕೆಗೆ ಸಹಾಯ ಮಾಡುವಂತೆ ಕೋರಿದರು. ಆಗ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ಅವರು ಪ್ರಸವ ಮಾಡಿಸಲು ಸಹಕರಿಸಿದರು. ಈ ವೇಳೆ ಮಹಿಳೆ ಹಣ್ಣು ಮಗವಿಗೆ ಜನ್ಮನೀಡಿದರು. ಈ ಎರಡು ಹೆಣ್ಣು ಜೀವಗಳ ರಕ್ಷಣೆಯನ್ನು ಮಾಡಿ ಮಾನವೀಯತೆಯನ್ನು ಶೋಭಾ ಅವರು ಮೆರೆದಿದ್ದಾರೆ.
ಇನ್ನು ಅವರಿಗೆ ಹೆರಿಗೆ ಮಾಡಿಸುವುದು ಗೊತ್ತಿರಲಿಲ್ಲ. ಆದರೂ ಧೈರ್ಯಮಾಡಿ ಹೆರಿಗೆ ಮಾಡಿಸಿದ್ದು, ಅಲ್ಲಿದ್ದ ಪುರುಷರು ಕೂಡ ಶೋಭಾ ಅವರನ್ನು ಹಾಡಿಹೊಗಳಿದ್ದರು.
ಜಿಲ್ಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಶೋಭಾ ಅವರನ್ನು ಸನ್ಮಾನಿಸಿ ಅವರ ಮಾನವೀಯ ಮೌಲ್ಯವು ನಮ್ಮ ಶಿಕ್ಷಣ ಇಲಾಖೆಗೆ ಮಾದರಿಯಾಗಿದೆ ಎಂದು ಶುಭ ಹಾರೈಸಿದರು. ಇನ್ನೊದೆಡೆ ಈ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಶೋಭಾ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಗುಣವನ್ನು ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸೋಮೇಗೌಡ, ಖಜಾಂಚಿಗಳಾದ ಮಹದೇವ್, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಲಿಂಗಿ ಸುರೇಶ್, ಸಂಘಟನಾ ಕಾರ್ಯದರ್ಶಿ ರೇವಣ್ಣ, ಶಾಸಕರ ಆಪ್ತ ಸಹಾಯಕ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ನಾಗರಾಜು, ಬಿ ಆರ್ ಪಿ ಗಳಾದ ಶ್ರೀಕಂಠ ಶಾಸ್ತ್ರಿ, ಅಂಕೇಶ್, ಸಿ ಆರ್ ಪಿ ಗಳಾದ ವೀಣಾಶ್ರೀ , ಶಿಕ್ಷಕರಾದ ಆಶಾ ಬಾಯಿ,ಅನ್ನಪೂರ್ಣ ನಗರಪಾಲಿಕೆ ಸದಸ್ಯರಾದ ಛಾಯ ಇದ್ದರು.
Olledagli taayi