NEWSಉದ್ಯೋಗನಮ್ಮಜಿಲ್ಲೆ

ಅಪಘಾತಕ್ಕೀಡಾದ ನೌಕರನಿಗೆ ಬದಲಿ ಹುದ್ದೆ ನೀಡಿದರೂ ವೇತನ ಕಡಿತಗೊಳಿಸಬಾರದು: ಹೈಕೋರ್ಟ್ ಮಹತ್ವದ ಆದೇಶ

ಮೂರು ತಿಂಗಳೊಳಗೆ ಚಾಲಕ ವೃತ್ತಿಗೆ ತಕ್ಕ ಎಲ್ಲ ಹಿಂಬಾಕಿ ನೀಡಲು ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಸ್ತೆ ಅಪಘಾತದಿಂದ ಶೇ.40 ಅಂಗವಿಕಲರಾದ ಬಿಎಂಟಿಸಿಯ ಚಾಲಕರೊಬ್ಬರಿಗೆ ಚಾಲಕನ ವೇತನ ಶ್ರೇಣಿಯಿಂದ ಕಚೇರಿ ಸಹಾಯಕನ ವೇತನ ಶ್ರೇಣಿಗೆ ಹಿಂಬಡ್ತಿ ನೀಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕ್ರಮವನ್ನು ರದ್ದುಪಡಿಸಿರುವ ಹೈಕೋರ್ಟ್. ಚಾಲಕನ ವೇತನ ಶ್ರೇಣಿಯಂತೆಯೇ ವೇತನ ಪಾವತಿಸಬೇಕು ಎಂದು ಆದೇಶ ಮಾಡಿದೆ.

ರಸ್ತೆ ಅಪಘಾತಕ್ಕೆ ಒಳಗಾಗಿ ಶೇ.40ರಷ್ಟು ಅಂಗವಿಕರಾಗಿದ್ದಕ್ಕೆ ವೇತನ ಶ್ರೇಣಿಯಿಂದ ಹಿಂಬಡ್ತಿ ನೀಡಿದ್ದನ್ನು ಪ್ರಶ್ನಿಸಿ ಬಿಎಂಟಿಸಿಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಎಂ.ಬಿ.ಜಯದೇವಯ್ಯ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವೇತನ ಶ್ರೇಣಿಗೆ ಹಿಂಬಡ್ತಿ ನೀಡುವುದಕ್ಕೆ ನಿಮಗೆ ಯಾವುದೇ ಅವಕಾಶವುಲ್ಲ ಎಂದು ತಿಳಿಸಿದೆ.

ಇನ್ನು ವಿಶೇಷ ಚೇತನರ ಸೆಕ್ಷನ್ 47ರಂತೆ ಸರ್ಕಾರಿ ಉದ್ಯೋಗದಲ್ಲಿರುವ ಸಂದರ್ಭ ಅಂಗವಿಕಲರಾದಲ್ಲಿ ವೇತನ ಶ್ರೇಣಿ ಬದಲಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಅಲ್ಲದೇ, ಅಂಥ ವ್ಯಕ್ತಿ ಆ ಹುದ್ದೆಗೆ ಅರ್ಹರಿಲ್ಲದಿದ್ದಲ್ಲಿ, ಬೇರೊಂದು ಉದ್ಯೋಗ ನೀಡಬಹುದಾಗಿದೆ. ಆದರೆ, ನಿವೃತ್ತಿಯಾಗುವವರೆಗೂ ಯಾವುದೇ ವೇತನ ಶ್ರೇಣಿಯನ್ನು ಬದಲಾವಣೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಪ್ರಕರಣವೇನು: ಅರ್ಜಿದಾರರಾದ ಎಂ.ಬಿ.ಜಯದೇವಯ್ಯ ಅವರು ರಸ್ತೆ ಅಪಘಾತದಿಂದಾಗಿ ಶೇ.40ರಷ್ಟು ಅಂಗವಿಕಲರಾದರು. ಇದರಿಂದ ಬಸ್ ಚಾಲಕನಾಗಿ ಮುಂದುವರೆಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ವೈದ್ಯಕೀಯ ವರದಿ ತಿಳಿಸಿತ್ತು. ಜತೆಗೆ, ಶಿಸ್ತು ಪ್ರಾಧಿಕಾರವು ಅಪಘಾತದಲ್ಲಿ ಚಾಲಕ ನಿರ್ಲಕ್ಷ್ಯ ವಹಿಸಿರಲಿಲ್ಲ ಎಂದು ಸಹ ತಿಳಿಸಿತ್ತು.

ಆದರೆ, ಬಿಎಂಟಿಸಿಯು ಚಾಲಕನಾಗಿದ್ದ ಜಯದೇವಯ್ಯ ಅವರನ್ನು ಕಚೇರಿ ಸಹಾಯಕನ್ನಾಗಿ ನೇಮಿಸಿ, ವೇತನ ಶ್ರೇಣಿಯಲ್ಲಿ ಹಿಂಬಡ್ತಿ ನೀಡಿತ್ತು. ಇದನ್ನು ಪ್ರಶ್ನಿಸಿ ಜಯದೇವಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಚಾಲಕನ ವೇತನ ಶ್ರೇಣಿ ನೀಡುವಂತೆ ಸೂಚನೆ ನೀಡಿತ್ತು. ಆದರೂ ಬಿಎಂಟಿಸಿ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಇದನ್ನು ಪ್ರಶ್ನಿಸಿ ಜಯದೇವಯ್ಯ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು.

ಈ ನಡುವೆ ಜಯದೇವಯ್ಯ ಅವರನ್ನು ಮತ್ತೊಂದು ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. 2014ರಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಪಡೆದು ಬಿಎಂಟಿಸಿಗೆ ಸಲ್ಲಿಸಿದ್ದರು. ಆದರೂ, ಬಿಎಂಟಿಸಿ ವೇತನ ಶ್ರೇಣಿಯನ್ನು ಬದಲಾಯಿಸಲು ಮುಂದಾಗಿರಲಿಲ್ಲ.

ಇದನ್ನು ಪ್ರಶ್ನಿಸಿ ಜಯದೇವಯ್ಯ ಮತ್ತೊಂದು ಬಾರಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಚಾಲಕನ ವೇತನ ಶ್ರೇಣಿಯಂತೆ ವೇತನ ಪಾವತಿ ಮಾಡಬೇಕು. ಅಲ್ಲದೆ ಈ ಹಿಂದಿನಿಂದಲೂ ಹಿಂಬಡ್ತಿಯಂತೆ ಕಡಿತ ಗೊಳಿಸಿರುವ ವೇತನವನ್ನು ಇನ್ನು ಮೂರು ತಿಂಗಳೊಳಗೆ ಪಾವತಿಸಬೇಕು ಎಂದು ಆದೇಶ ಹೊರಡಿಸಿ ಅರ್ಜಿ ಇತ್ಯರ್ಥ ಪಡಿಸಿತು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ