ಬೆಂಗಳೂರು: ರಾಜ್ಯ ಕಬ್ಬು ಬೆ ಹ್ಳೆಗಾರರ ಸಂಘ ರೈತರ ವಿವಿಧ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ಇದೆ ಸೆ.26 ರಂದು ಬೆಂಗಳೂರು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಕಬ್ಬಿನ ಎಫ್‌ಆರ್‌ಪಿ ದರ 3500 ರೂ. ನಿಗದಿ ಯಾಗಬೇಕು. ಕೃಷಿ ಪಂಪ್ ಸೆಟ್ ಗಳಿಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸುವ ಉನ್ನಾರದಿಂದ,ವಿದ್ಯುತ್ ಖಾಸಗಿ ಕರಣ ಕಾಯ್ದೆ ಮಾಡುವುದನ್ನು ಕೈ ಬಿಡಬೇಕು.
ರೈತರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ Dr M S ಸ್ವಾಮಿನಾಥನ್ ಆಯೋಗದ ವರದಿಯಂತೆ ಖಾತರಿ ಬೆಲೆ ಶಾಸನ ಜಾರಿಯಾಗಬೇಕು. ಮೂರು ಕೃಷಿಕಾಯ್ದೆ ವಿರೋಧಿಸಿ ಒಂದು ವರ್ಷಗಳ ಕಾಲ ದೆಹಲಿ ರೈತ ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಕೂದಲೇ ಪರಿಹಾರ ಕೊಡಬೇಕು.
ಕೊರೊನಾ ಲಾಕ್ ಡೌನ್ ಸಂಕಷ್ಟ, ಮಳೆ ಹಾನಿ, ಅತಿವೃಷ್ಟಿ ಬೆಳೆಹಾನಿ ಪರಿಹಾರ, ಮೂರೂವರೆ ಲಕ್ಷ ರೈತರ ಆತ್ಮಹತ್ಯೆ ಪರಿಗಣಿಸಿ ದೇಶದ ಎಲ್ಲ ರೈತರ ಸಾಲಮನ್ನಾ ಮಾಡಬೇಕು (ಉದ್ಯಮಿಗಳ ಸಾಲ ಮನ್ನಾ ಮಾಡಿರುವ ರೀತಿ).
ಕೃಷಿ ಉಪಕರಣಗಳು,ಕೃಷಿ ಉತ್ಪನ್ನಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದು ಗೊಳಿಸಬೇಕು. ಪಸಲ್ ಬೀಮಾ ಬೆಳೆ ವಿಮೆ ಯೋಜನೆಯ ಮಾನ ದಂಡ ಬದಲಾಗಬೇಕು ಅತಿವೃಷ್ಠಿ ಮಳೆ ಹಾನಿ ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಸಿಗುವಂತಾಗಬೇಕು. ಅತಿವೃಷ್ಟಿ ಸಮಸ್ಯೆಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಸಾಲ ವಸೂಲಾತಿ ನಿಲ್ಲಬೇಕು, ಇರುವ ಸಾಲದ ಮೇಲೆ ಶೇ 25 ರಷ್ಟು ಹೆಚ್ಚುವರಿ ಸಾಲ ನೀಡಬೇಕು.
ಎಂಬಿತ್ಯಾದಿ ಒತ್ತಾಯಗಳ ಬಗ್ಗೆ ತಾಲೂಕು,ಜಿಲ್ಲಾ ಮಟ್ಟದ ಲ್ಲಿ ಕಳೆದ 2 ತಿಂಗಳಿಂದಲೂ ಹಲವಾರು ವಿಭಿನ್ನ ರೀತಿಯ ಹೋರಾಟ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಗಮನ ಸೆಳೆದಿದ್ದರು ಯಾವುದೇ ಕ್ರಮ ಜಾರಿಯಾಗಿರುವುದಿಲ್ಲ ಆದ್ದರಿಂದ ಇದೆ 26 ರಂದು ಬೆಂಗಳೂರು ವಿಧಾನಸೌಧ ಚಲೋ ಹಮ್ಮಿ ಕೊಳ್ಳಲಾಗಿದೆ.
ಹೀಗಾಗಿ ರೈತರು, ರೈತಪರ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ತಂಡೋಪ ತಂಡವಾಗಿ ಊಟದ ಬುತ್ತಿ ಜತೆಗೆ ಹಾಸಿಗೆ ಹೊದಿಕೆ ತೆಗೆದು ಕೊಂಡು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಬರಬೇಕೆಂದು ಅತ್ತಹಳ್ಳಿ ದೇವರಾಜ್ ಮನವಿ ಮಾಡಿದ್ದಾರೆ.