ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟು ಶೇ.69.20 ಫಲಿತಾಂಶ ದಾಖಲಾಗಿದ್ದು, ಈ ಪೈಕಿ ವಿಭಾಗವಾರು ಅಂದರೆ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಹೆಸರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜಿನ ಕರೀಗೌಡ ದಾಸನಗೌಡ್ರ ಪ್ರಥಮ ಸ್ಥಾನ, ಇದೇ ಕಾಲೇಜಿನ ಆರ್.ಎಂ. ಸ್ವಾಮಿ ದ್ವಿತೀಯ ಮತ್ತು ಮೊಹಮ್ಮದ್ ರಫೀಕ್ ಎಚ್. ತೃತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಒಂದೇ ಕಾಲೇಜಿ ಮೂವರು ವಿದ್ಯಾರ್ಥಿಗಳು ರಾಜ್ಯದಲ್ಲಿ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿಸಿದ್ದಾರೆ.
ವಾಣಿಜ್ಯ ವಿಭಾಗ: ಮಲ್ಲೇಶ್ವರದ ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಟಿಸಿಎಸ್ ಅರವಿಂದ್ ಶ್ರೀವಾತ್ಸವ್ ಪ್ರಥಮ, ಮೈಸೂರಿನ ಎಜಿಎಸ್ ಗರ್ಲ್ಸ್ ಪಿಯು ಕಾಲೇಜಿನ ಜೆ.ಎನ್. ಬೃಂದಾ ದ್ವಿತೀಯ ಮತ್ತು ಸಾಗರದ ಸರ್ಕಾರಿ ಪಿಯು ಕಾಲೇಜಿನ ಜಿ.ಎಂ. ಸಿಂಧೂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗ: ಉಡುಪಿಯ ವಿದ್ಯೋದಯ ಪಿಯು ಕಾಲೇಲೇಜಿನ ಅಭಿಜ್ಞಾ ರಾವ್ ಪ್ರಥಮ, ಬೆಂಗಳೂರಿನ ಮಲ್ಲೇಶ್ವರದ ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಎಂ.ಎನ್. ಪ್ರೇರಣಾ ದ್ವಿತೀಯ ಮತ್ತು ಜಯನಗರದ ಆರ್‌ವಿ ಪಿಯು ಕಾಲೇಜಿನ ಆಕಾಂಕ್ಷಾ ಪೈ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.