NEWSನಮ್ಮಜಿಲ್ಲೆನಮ್ಮರಾಜ್ಯ

ವಿಜಯಪುರ: ಬಸ್‌ನಲ್ಲಿ ಬಿಟ್ಟುಹೋಗಿದ್ದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಚಾಲಕ, ನಿರ್ವಾಹಕರು

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ದ 40 ಸಾವಿರ ರೂ.ಗೂ ಹೆಚ್ಚಿನ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಮರಳಿ ಪ್ರಯಾಣಿಕರಿಗೆ ತಲುಪಿಸುವ ಮೂಲಕ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ.

ನಗರ ಸಾರಿಗೆ ಅನುಸೂಚಿ ಸಂಖ್ಯೆ 57 ರಲ್ಲಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮುದ್ದೆಬಿಹಾಳದ ಮಹಿಳೆ ಶಾಂತಾಬಾಯಿ ಲಕ್ಷ್ಮಣ ಉಳ್ಳಾಗಡ್ಡಿ ಎಂಬುವರು ಭಾನುವಾರ ಮಧ್ಯಾಹ್ನ ಪ್ರಯಾಣ ಬೆಳೆಸಿದ್ದಾರೆ ಆದರೆ ಇಳಿಯುವಾಗ ತಾವು ತಂದಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳಿದ್ದ ಪರ್ಸ್‌ ಮರೆತು ಬಿಟ್ಟು ಹೋಗಿದ್ದರು.

ಸೀಟ್‌ನಲ್ಲಿ ಪರ್ಸ್‌ ಇರುವುದನ್ನು ಗಮನಿಸಿದ ನಿರ್ವಾಹಕ ಐ.ಎ. ಮನಿಯಾರ ಅವರು ಪರ್ಸ್‌ ತೆಗೆದುಕೊಂಡು ಚಾಲಕ ಎ. ಐ. ಅಮರಣವರ ಅವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಆ ಪರ್ಸ್‌ ಯಾರದಿರಬಹುದೆಂದು ಯೋಚಿಸಿ, ಪತ್ತೆ ಹಚ್ಚಲು ಮುಂದಾದರು.

ಆಗ ಪರ್ಸ್‌ ಓಪನ್‌ ಮಾಡಿ ನೋಡಿದಾಗ ಅದರಲ್ಲಿ ಬ್ಯಾಂಕ್‌ ಪಾಸ್‌ಪುಸ್ತಕ ಇತ್ತು. ಅದರಲ್ಲಿ ಒಂದು ಪೋನ್‌ ನಂಬರ್‌ ಬರೆಯಲಾಗಿತ್ತು. ಆ ಫೋನ್‌ ನಂಬರ್‌ಗೆ ಕರೆ ಮಾಡಿ ವಿಷಯ ತಿಳಿಸಿ ಬರಹೇಳಿದ್ದಾರೆ. ಬಳಿಕ ಆ ಪರ್ಸ್‌ಅನ್ನು ವಿಭಾಗದ ಭದ್ರತಾ ಅಧಿಕಾರಿ ಸಂಜೀವ್‌ ಕುಮಾರ್‌ ಅವರ ಸಮ್ಮುಖದಲ್ಲಿ ವಾರಸುದಾರ ಮಹಿಳೆ ಶಾಂತಾಬಾಯಿ ಲಕ್ಷ್ಮಣ ಉಳ್ಳಾಗಡ್ಡಿ ಅವರಿಗೆ ಹಸ್ತಂತರಿಸಿದರು.

ಶಾಂತಾಬಾಯಿ ಲಕ್ಷ್ಮಣ ಉಳ್ಳಾಗಡ್ಡಿ ಈ ವೇಳೆ ಮಾತನಾಡಿ, ನಾನು 40 ಸಾವಿರ ರೂಪಾಯಿಗೂ ಹೆಚ್ಚು ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಎಲ್ಲಿ ಕಳೆದುಕೊಂಡೆ ಎಂಬ ಚಿಂತೆಯಲ್ಲಿದ್ದೆ ಆ ವೇಳೆ ನನಗೆ ಫೋನ್‌ ಬಂದಿದ್ದು ನೀವು ಕಳೆದುಕೊಂಡಿರುವ ಬಂಗಾರವಿದ್ದ ಪರ್ಸ್‌ ಸಿಕ್ಕಿದೆ ತೆಗೆದುಕೊಂಡು ಹೋಗಬನ್ನಿ ಎಂದು ಹೇಳಿದರು.

ಆಗ ನನಗೆ ಹೋದ ಜೀವ ಮತ್ತೆ ಬಂದಂತಾಯಿತು. ನಾವು ಕಷ್ಟಪಟ್ಟು ದುಡಿದು ತೆಗೆದುಕೊಂಡಿದ್ದ ವಸ್ತುಗಳು ಕಳೆದುಕೊಂಡೆ ಎಂದು ದುಃಖಿತಳಾಗಿದ್ದೆ. ಆದರೆ ಅದನ್ನು ಮರಳಿ ನಮಗೆ ಒಪ್ಪಿಸಿದ ಚಾಲಕ ಎ.ಐ. ಅಮರಣವರ ಹಾಗೂ ನಿರ್ವಾಹಕ ಐ.ಎ. ಮನಿಯಾರ ಅಣ್ಣಾವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇನ್ನು ಚಾಲನಾ ಸಿಬ್ಬಂದಿಗೆ ಘಟಕದ ಪರವಾಗಿ ವಿಭಾಗದ ಭದ್ರತಾ ಅಧಿಕಾರಿ ಸಂಜೀವ್‌ ಕುಮಾರ್‌ ಸೇರಿ ಅಧಿಕಾರಿಗಳು ಮತ್ತು ನೌಕರರು ಅಭಿನಂದನೆ ಸಲ್ಲಿಸಿದರೆ, ಇತ್ತ ಚಾಲಕ ಹಾಗೂ ನಿರ್ವಾಹಕರ ಕಾರ್ಯಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ