ಮುಂಬೈ: ಅಲ್ಪಸ್ವಲ್ಪ ಓದು ಬರಹ ಬರುವವರು ಸೇರಿದಂತೆ ಎಲ್ಲರನ್ನು ತನ್ನತ್ತ ಸೆಳೆದುಕೊಂಡಿರುವ ಜನಪ್ರಿ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆಪ್ ಇತ್ತೀಚೆಗಂತೂ ಹೊಸ ಫೀಚರ್ಸ್ಗಳನ್ನು ಪರಿಚಯಿಸುವ ಮೂಲಕ ಇತರ ಸಾಮಾಜಿಕ ಜಾಲತಾಣಗಳನ್ನು ಹಿಂದಿಕ್ಕುವುದರಲ್ಲಿ ಸದಾ ಮುಂದಿದೆ ಎಂಬುದನ್ನು ತೋರಿಸುತ್ತಲೇ ಇದೆ.
ತನ್ನ ಬಳಕೆದಾರರಿಗಾಗಿ ಕಳೆದ ವರ್ಷ ಹಲವಾರು ಫೀಚರ್ಸ್ಗಳನ್ನು ಹೊರತಂದಿದ್ದಲ್ಲೆ ಈಗ ಮತ್ತೆ ಅದೇ ರೀತಿಯಲ್ಲಿ 2023ರಲ್ಲೂ ಹಲವಾರು ನವೀಕರಣಗಳನ್ನು ಮಾಡುತ್ತಿದ್ದು, ಈ ವರ್ಷದ ಆರಂಭದಿಂದಲೇ WhatsApp ತನ್ನಲ್ಲಿನ ಕಾರ್ಯವೈಖರಿಯಲ್ಲಿ ಬದಲಾವಣೆಯನ್ನು ತರುತ್ತಲೇ ಇದೆ.
ಕೆಲದಿನಗಳ ಹಿಂದಷ್ಟೇ ವಾಟ್ಸ್‌ಆಪ್ ಸ್ಟೇಟಸ್ನಲ್ಲಿ ವಾಯ್ಸ್ ಮೆಸೇಜ್ ಶೇರ್ ಮಾಡುವ ಫೀಚರ್ ಬಿಡುಗಡೆ ಮಾಡಿತ್ತು. ತದನಂತರದಲ್ಲಿ ಬ್ಲಾಕ್ ಶಾರ್ಟ್ಕಟ್ (Block Shortcut) ಮಾಡುವ ಫೀಚರ್ ಪರಿಚಯಿಸಿತ್ತು. ಇದೀಗ ಮತ್ತೆ ಹೊ ಅಪ್ಡೇಟ್ ಬಿಡುಗಡೆ ಮಾಡಿದೆ.
ವಾಟ್ಸ್‌ಆಪ್ ಸದ್ಯ ಪರಿಚಯಿಸುತ್ತಿರುವ ಈ ಫೀಚರ್ ಇದುವರೆಗೆ ಬೇರೆ ಯಾವುದೇ ಅಪ್ಲಿಕೇಶನ್ಗಳಲ್ಲೂ ಇಲ್ಲ. ಹೀಗಾಗಿ ಈ ಪರಿಚಯಿಸುತ್ತಿರುವ ಈ ಅಪ್ಲಿಕೇಶನ್‌ನಿಂದಾಗಿ ಇನ್ಮುಂದೆ ವಾಟ್ಸ್‌ಆಪ್‌ನಲ್ಲಿ ಕಾಲ್ ಶೆಡ್ಯೂಲ್ ಮಾಡಿಯೂ ಇಟ್ಟುಕೊಳ್ಳಬಹುದಾಗಿದೆಯಂತೆ.
ವಾಟ್ಸ್‌ಆಪ್‌ನಲ್ಲಿ ಈಗಾಗಲೇ ವಾಯ್ಸ್ ಹಾಗೂ ವಿಡಿಯೋ ಕರೆ ಮಾಡಲು ಅವಕಾಶ ನೀಡಲಾಗಿದೆ. ಅದಾಗ್ಯೂ ಈ ವಿಭಾಗದಲ್ಲಿ ಇನ್ನಷ್ಟು ಹೊಸ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿರುವ ವಾಟ್ಸ್‌ಆಪ್ ಬಳಕೆದಾರರಿಗೆ ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸುವ ಆಯ್ಕೆಯ ಫೀಚರ್ಸ್ ನೀಡುವಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.
ಈ ಸೌಲಭ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರಲಿದ್ದು, ಈ ಮೂಲಕ ಬೇಕಾದವರ ಜತೆಗೆ ಸಮಯಕ್ಕಿಂತ ಮುಂಚಿತವಾಗಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕರೆಯನ್ನು ಯೋಜಿಸಬಹುದಾಗಿದೆ. ಈ ಮೂಲಕ ಇನ್ಮುಂದೆ ಬಳಕೆದಾರರು ಯಾವುದೇ ಕಾಲ್ಗಳನ್ನು ವಾಟ್ಸ್‌ಆಪ್‌ನಲ್ಲಿ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಕಂಪೆನಿ ಹೇಳಿದೆ.