ಮಂಡ್ಯ: ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರು ಪಕ್ಷಗಳು ನಾಡಿನ ಜನತೆಗೆ ದ್ರೋಹ ಮಾಡಿವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಮುಖ್ಯ ಮಂತ್ರಿ ಚಂದ್ರು ಕಿಡಿಕಾರಿದ್ದಾರೆ.
ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ ಎಂದು ತಿಳಿಸಿದರು.
ಇನ್ನು ಮಂಡ್ಯದ ಜನತೆ ಪ್ರಾಮಾಣಿಕರಾಗಿದ್ದು ಪ್ರಾಮಾಣಿಕರನ್ನು ನಂಬುವವರು. ಹೀಗಾಗಿ ಈ ಬಾರಿ ಎಎಪಿಯನ್ನು ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರುಯಕರ್ತರು ಎಎಪಿ ಬೆಂಬಲಿಸಲು ಮನವಿ ಮಾಡಬೇಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಚೆನ್ನಪ್ಪ ಗೌಡ, ರಾಜ್ಯ ಕಾರ್ಯದರ್ಶಿ ನಂಜಪ್ಪ ಕಾಳೆಗೌಡ, ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಸಿ.ಮಹದೇವಸ್ವಾಮಿ ಮತ್ತು ಮಳವಳ್ಳಿ ಕ್ಷೇತ್ರ, ಮಂಡ್ಯ ಜಿಲ್ಲಾಧ್ಯಕ್ಷರು ಶಿವಕುಮಾರ್, ಬೂದನೂರ ಬೋಮ್ಮಾಯ್ಯ, ಮುಖಂಡರಾದ ಜೆಸಿಬಿ ಕುಮಾರ್, ಅಭಿಷೇಕ್, ಅಶೋಕ್, ವಿಶ್ವನಾಥ್ ಹಾಗೂ ಶಿವಣ್ಣ ಇತರರು ಭಾಗವಹಿಸಿದ್ದರು.